ಕಾರು ಅಪಘಾತ : ನಟಿ ಯಶಿಕಾ ಸ್ಥಿತಿ ಗಂಭೀರ..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಜು. 25- ಚಾಲಕನ ನಿಯಂತ್ರಣ ತಪ್ಪಿ ಕಾರು ಉರುಳಿ ಬಿದ್ದ ಪರಿಣಾಮ ತಮಿಳಿನ ಖ್ಯಾತ ನಟಿ ಯಶಿಕಾ ಆನಂದ್‍ಗಂಭೀರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ತಡರಾತ್ರಿ ಬಿಗ್ ಬಾಸ್ ಸ್ರ್ಪ ಹಾಗೂ ನಟಿ ಯಶಿಕಾ ಆನಂದ್ ಹಾಗೂ ಅವರ ಸ್ನೇಹಿತರು ಪ್ರಯಾಣಿ ಸುತ್ತಿದ್ದ ಕಾರು ಚೆನ್ನೈನ ಮಹಾ ಬಲಿಪುರಂನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಉರುಳಿ ಬಿದ್ದಿದೆ.

ಕಾರು ಉರುಳಿದ ಪರಿಣಾಮದಿಂದ ನಟಿ ಯಶಿಕಾಳ ಸ್ನೇಹಿತೆ ವಲ್ಲಿ ಚೆಟ್ಟಿ ಭವಾನಿ ಅವರು ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ನಟಿ ಹಾಗೂ ಇನ್ನಿತರ ಸ್ನೇಹಿತರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಟಿ ಯಶಿಕಾ ಪ್ರಯಾಣಿಸು ತ್ತಿದ್ದ ಕಾರು ಅಪಘಾತಕ್ಕೀಡಾದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮಹಾಬಲಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಯಶಿಕಾ 2016ರಲ್ಲಿ ಬಿಡುಗಡೆಗೊಂಡ ಕವಲೈ ವೆಂಡಮ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆದು, ಧುರುವಾಂಗಳ್ ಪಾಥಿರ್ನಾ, ನೋಟ, ಪಂದ್ಯಂ ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಇವನ್ ತಾನ್ ಉತ್ತಮನ್, ರಾಜಾ ಭೀಮಾ, ಕದಮಾಲಯ್ ಸೈ, ಪಬ್‍ಬಟನ್, ಸುಲರ್ ಚಿತ್ರಗಳು ಬಿಡುಗಡೆಯಾಗಬೇಕಿದೆ.

Facebook Comments

Sri Raghav

Admin