ಮತದಾನ ಮಾಡಿದ್ದು ಸಂತಸ ತಂದಿದೆ : ನಟಿ ಅಮೂಲ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ. 3- ಕೊರೊನಾ ನಡುವೆಯೂ ಮತದಾರರು ಬಲು ಉತ್ಸಾಹದಿಂದ ಬಂದು ಮತದಾನ ಮಾಡಿರುವುದು ಸಂತಸ ತಂದಿದೆ ಎಂದು ನಟಿ ಅಮೂಲ್ಯ ತಿಳಿಸಿದ್ದಾರೆ. ಆರ್.ಆರ್. ನಗರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಬೂತ್ ನಂಬರ್ 369 ಬಿಇಟಿ ಕಾನ್ವೆಂಟ್‍ನಲ್ಲಿ ಮತ ಚಲಾಯಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಡುವೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮತದಾರರು ಉತ್ಸುಕತೆ ತೋರುವುದಿಲ್ಲ ಎಂದು ಭಾವಿಸಿದ್ದೆ, ಆದರೆ ವಿಕಲಚೇತನರು ವೀಲ್‍ಚೇರ್‍ನಲ್ಲಿ ಬಂದು ಮತದಾನ ಮಾಡುತ್ತಿರುವುದನ್ನು ನೋಡಿ ಮೂಕವಿಸ್ಮಿತಳಾಗಿದ್ದೇಳೆ ಎಂದು ಹೇಳಿದರು.

ಮತದಾನ ಎಂಬುದು ಪವಿತ್ರವಾದ ಹಕ್ಕಾಗಿದ್ದು, ಪ್ರತಿಯೊಬ್ಬ ಮತದಾರರು ತಪ್ಪದೇ ಮತದಾನ ಮಾಡಿ ಎಂದು ಅಮೂಲ್ಯ ಮನವಿ ಮಾಡಿದರು. ಕೊರೊನಾ ಸಂಕಷ್ಟ ಕಾಲದಲ್ಲಿ ಮತಗಟ್ಟೆಗೆ ಬರುವ ಮತದಾರರ ಆರೋಗ್ಯ ದೃಷ್ಟಿಯಿಂದ ಅನೇಕ ಸುರಕ್ಷತಾ ಕ್ರಮಗಳನ್ನು ಚುನಾವಣಾ ಆಯೋಗವು ಕೈಗೊಂಡಿದೆ.

Facebook Comments