ಡ್ರಗ್ ಜಾಲದಲ್ಲಿ ಮತ್ತಿಬ್ಬರು ನಟಿಯರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ಡ್ರಗ್ಸ್ ಜಾಲದಲ್ಲಿ ಇನ್ನಿಬ್ಬರು ನಟಿಯರ ಹೆಸರು ಕೇಳಿಬಂದಿದ್ದು, ಆ ನಟಿಯರಲ್ಲಿ ಈಗ ನಡುಕ ಉಂಟಾಗಿದೆ.
ಈ ಇಬ್ಬರು ನಟಿಯರ ಪೈಕಿ ಒಬ್ಬರು ಲಾಕ್‍ಡೌನ್ ಸಂದರ್ಭದಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗೆ ಆಗಾಗ ಹೋಗಿಬರುತ್ತಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭ್ಯವಾಗಿದೆ.

ನಗರದ ಹೆಬ್ಬಾಳ ರಸ್ತೆಯಲ್ಲಿನ ಭವ್ಯ ಬಂಗಲೆಯಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಗೆ ಈ ನಟಿ ತಮ್ಮ ಸ್ನೇಹಿತರ ಜತೆ ಹೋಗಿ ಬರುತ್ತಿದ್ದರೆಂದು ಗೊತ್ತಾಗಿದೆ.

ಮತ್ತೊಬ್ಬ ನಟಿ ಶ್ರೀಲಂಕಾ, ಗೋವಾ ಮುಂತಾದ ಕಡೆಗಳಲ್ಲಿ ನಡೆಯುತ್ತಿದ್ದ ಕ್ಯಾಸಿನೋಗೆ ಹೋಗುತ್ತಿದ್ದರೆಂದು ಗೊತ್ತಾಗಿದೆ. ಈಕೆ ನಟಿಯರಾದ ರಾಗಿಣಿ ಮತ್ತು ಸಂಜನಾ ಆವರಿಗೆ ಆಪ್ತರು.

ಈಕೆಯೂ ಸಹ ಹಲವಾರು ಡ್ರಗ್ಸ್ ಪಾರ್ಟಿಗಳಿಗೆ ತಮ್ಮ ಸ್ನೇಹಿತರೊಂದಿಗೆ ತೆರಳಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ಜಾಲದ ಬಗ್ಗೆ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರಿಗೆ ಹಲವಾರು ನಟ-ನಟಿಯರ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.

ಈ ನಟಿಯರ ಆಪ್ತರು ಮತ್ತು ಅವರುಗಳ ಚಲನವಲನದ ಬಗ್ಗೆ ಈಗಾಗಲೇ ಸಿಸಿಬಿ ಪೊಲೀಸರು ನಿಗಾ ಇಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಅವರನ್ನು ವಿಚಾರಣೆಗೆ ಕರೆಸಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ.

Facebook Comments

Sri Raghav

Admin