ಇಡಿ ವಿಚಾರಣೆ ಗೆ ಒಳಗಾಗಲಿರುವ ಬಾಲಿವುಡ್ ನಟಿ ಜಾಕ್ವೇಲಿನ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಸೆ.25-ಇನ್ನೂರು ಕೋಟಿ ರೂ. ವಂಚನೆ ಆರೋಪಕ್ಕೆ ಗುರಿಯಾಗಿರುವ ಖ್ಯಾತ ಬಾಲಿವುಡ್ ನಟಿ ಜಾಕ್ವೇಲಿನಾ ಫರ್ನಾಂಡಿಸ್ ಅವರನ್ನು ಎರಡನೆ ಬಾರಿಗೆ ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ರ್ಯಾನ್‍ಬಾಕ್ಸಿ, ಶಿಂದರ್ ಸಿಂಗ್ ಹಾಗೂ ಮಲ್ವಿಂದರ್ ಸಿಂಗ್ ಕುಟುಂಬಕ್ಕೆ 200 ಕೋಟಿ ರೂ. ವಂಚಿಸಿದ್ದ ಸುಖೇಶ್ ಚಂದ್ರಶೇಖರ್ ಅವರೊಂದಿಗೆ ಜಾಕ್ವೇಲಿನಾ ನಂಟು ಹೊಂದಿದ್ದರು.

ಹೀಗಾಗಿ ಈ ಹಿಂದೆ ಅವರನ್ನು ಇಡಿ ಚಾರಣೆಗೆ ಒಳಪಡಿಸಿತ್ತ. ಇದೀಗ ಮತ್ತೊಮ್ಮೆ ಅವರ ಚಾರಣೆ ನಡೆಸಲಿ ಜಾರಿ ನಿರ್ದೇಶನಾಲಯ ತೀರ್ಮಾನಿಸಿದೆ. ಚೆನ್ನೆನ ಸಮುದ್ರ ತೀರದಲ್ಲಿರುವ ಚಂದ್ರಶೇಖರ್ ಅವರ ನಿವಾಸದಿಂದ 83 ಲಕ್ಷ ನಗದು, ಒಂದು ಡಜನ್‍ಗೂ ಹೆಚ್ಚು ಐಷರಾಮಿ ಕಾರುಗಳನ್ನು ತನಿಖಾ ತಂಡ ವಶಪಡಿಸಿಕೊಂಡಿತ್ತು.

ತನ್ನ ಹದಿನೇಳು ವಯಸಿನಲ್ಲೇ ಅಪರಾಧ ಪ್ರಪಂಚಕ್ಕೆ ಕಾಲಿಟ್ಟಿದ್ದ ಚಂದ್ರಶೇಖರ್ ಇದುವರೆಗೂ ನೂರಾರು ಮಂದಿಗೆ ಕೋಟ್ಯಂತರ ರೂ.ವಂಚಿಸಿದ್ದಾನೆ. ಮಾತ್ರವಲ್ಲ ಸಧ್ಯ ಆತನ ರೋಣಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

ಜೈಲಿನಲ್ಲಿದ್ದರೂ ಆತ ನಿರಂತರವಾಗಿ ಜಾಕ್ವೇಲಿನಾ ಅವರೊಂದಿಗೆ ದೂರವಾಣಿ ಸಂಪರ್ಕ ಹೊಂದಿರುವುದು ಪತ್ತೆಯಾಗಿರುವುದರಿಂದ ಆಕೆಯನ್ನು ಮತ್ತೊಮ್ಮೆ ಚಾರಣೆಗೊಳಪಡಿಸಲು ತೀರ್ಮಾನಿಸಲಾಗಿದೆ.

Facebook Comments