ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.12- ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಮನೆಮಾತಾದ ನಟಿ ಮಯೂರಿ ಇಂದು ತಮ್ಮ ಬಾಲ್ಯದ ಗೆಳೆಯರಾದ ಅರುಣ್ ರೊಂದಿಗೆ ಹಸೆಮಣೆ ಏರಿದ್ದಾರೆ. ನಗರದ ಜೆ.ಪಿ. ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶುಭ ಲಗ್ನದಲ್ಲಿ ಮಯೂರಿ ವಿವಾಹ ಮಾಡಿಕೊಂಡರು.

ತನ್ನ ಬಹುಕಾಲದ ಗೆಳೆಯನಾದ ಅರುಣ್ ಮತ್ತು ಮಯೂರಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಕುಟುಂಬಸ್ಥರ ಒಪ್ಪಿಗೆ ಪಡೆದು ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಶ್ವಿನಿ ನಕ್ಷತ್ರ ಧಾರವಾಹಿ ನಂತರ ಕೃಷ್ಣಲೀಲಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಖ್ಯಾತಿ ಪಡೆದರು. ಮಯೂರಿ ತಮ್ಮ ಮದುವೆ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಸ್ಟ್ ಹಾಕಿಕೊಂಡಿದ್ದು, ನಾನು ನನ್ನ ಬಾಲ್ಯದ ಗೆಳೆಯನೊಂದಿಗೆ ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಮಯೂರಿ ಅವನ್ನು ವರಿಸಿರುವ ಅರುಣ್ ಐಟಿ ಉದ್ಯೋಗಿಯಾಗಿದ್ದು, ಅಮೆರಿಕದಲ್ಲಿ ನೆಲೆಸಿದ್ದರು. ಸದ್ಯ ಈಗ ಅವರು ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಯೂರಿ ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ ನoತರ ಕೃಷ್ಣ ಲೀಲಾ , ಇಷ್ಟಕಾಮ್ಯ , ನಟರಾಜ ಸರ್ವಿಸ್ , ಕರಿಯ -2 ರ್ಯಾಂಬೋ -2 , ಜಾನಿ ಜಾನಿ ಎಸ್ ಪಪ್ಪಾ , 8 ಎಂ.ಎಂ , ರುಸ್ತುಂ, ನನ್ನ ಪ್ರಕಾರ, ಹಾಗೂ ಮೌನಂ ಸೇರಿದಂತೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಮಿಂಚಿ ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ.

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿರುವ ಈ ಮುದ್ದು ಮುಖದ ಚೆಲುವೆ ಮಯೂರಿಗೆ ಚಿತ್ರೋದ್ಯಮದ ನಟನಟಿಯರು ತಂತ್ರಜ್ಞರು ಗೆಳೆಯರು ಹಾಗೂ ಸ್ನೇಹಿತರು ಶುಭ ಕೋರಿದ್ದಾರೆ.

Facebook Comments