ಆತ್ಮಹತ್ಯೆಗೆ ಯತ್ನಿಸಿದ್ದ ಸಹ ನಟಿ ತಾಯಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನಪಟ್ಟಣ, ಜ.15- ಮಗಳ ವಿಚಾರದಲ್ಲಿ ಮಾನಸಿಕವಾಗಿ ಮನನೊಂದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಸಿ, ತಾಯಿ ಮೃತಪಟ್ಟು ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದ ಮಗಳು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರುವ ಮಗಳು ಸವಿತಾ (45) ಮೃತಪಟ್ಟಿದ್ದಾರೆ. ಹಾರ್ಲಳ್ಳಿ ಗ್ರಾಮದ ಸ್ವಾಮಿ ಎಂಬುವರ ಪತ್ನಿಯಾದ ಈಕೆ ವಾರದ ಹಿಂದೆ ತನ್ನ ತಾಯಿ ಚನ್ನಮ್ಮಳ ಜೊತೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು.

ಬಸವೇಶ್ವರ ನಗರದಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಮಗಳು ಚಲನಚಿತ್ರ ಸಹನಟಿ ವಿಜಯಲಕ್ಷ್ಮೀ ಸಹನಿರ್ದೇಶಕರೊಬ್ಬರ ಜೊತೆ ಪರಾರಿಯಾದ ಹಿನ್ನಲೆಯಲ್ಲಿ ಮನೆಯಲ್ಲಿ ಕಲಹ ನಡೆದಿತ್ತು.ಈ ಸಂಬಂಧವಾಗಿ ನಟಿ ವಿಜಯಲಕ್ಷ್ಮೀಯ ತಾಯಿ ಹಾಗೂ ಅಜ್ಜಿ ಮಾನಸಿಕವಾಗಿ ಮನನೊಂದು ಬಾಡಿಗೆ ಮನೆಯಲ್ಲೇ ಆತ್ಮಹತ್ಯೆಗೆ ಯತ್ನ ನಡೆಸಿದ್ದರು.

ತಾಯಿಮಗಳನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ವೃದ್ದರಾದ ಚನ್ನಮ್ಮ ಸಾವನಪ್ಪಿದ್ದರು. ಮಗಳು ಸವಿತಾ ಕೂಡ ನಿನ್ನೆ ರಾತ್ರಿ ನಿಧನರಾಗಿದ್ದಾರೆ.

# ಘಟನೆಯ ಹಿನ್ನಲೆ:
ಕೆಲವು ಸಿನಿಮಾಗಳಲ್ಲಿ ಸಹನಟಿಯಾಗಿ ನಟಿಸಿದ್ದ ವಿಜಯಲಕ್ಷ್ಮೀ ಸಿನಿಮಾವೊಂದರಲ್ಲಿ ಸಹನಿರ್ದೇಶಕನಾಗಿದ್ದ ಅಂಜನಪ್ಪ ಎಂಬುವರ ಜೊತೆ ಪ್ರೇಮಾಂಕುರವಾಗಿ ಆತನ ಜೊತೆ ಪರಾರಿಯಾಗಿದ್ದಳು.

ನಿರ್ಮಾಪಕರಿಂದ ಮುಂಗಡ ಹಣವನ್ನು ಪಡೆದಿದ್ದರಿಂದ, ನಿರ್ಮಾಪಕರು ಮನೆಯ ಮುಂದೆ ಗಲಾಟೆ ಮಾಡಿದ್ದರು. ತಾಯಿಯ ಮುಖಾಂತರ ಹಣವನ್ನು ನೀಡಲಾಗಿದ್ದು, ಹಣವನ್ನು ಹಿಂದಿರುಗಿಸಿ ಇಲ್ಲಾ ಮಗಳನ್ನು ಬರಮಾಡಿಕೊಂಡು ಸಿನಿಮಾದಲ್ಲಿ ನಟಿಸುವಂತೆ ಬಲವಂತ ಮಾಡಿದ್ದಾರೆನ್ನಲಾಗಿದೆ.

ತನ್ನ ಮಗಳಿಗೆ ತಲೆ ಕೆಡಿಸಿ ಕರದುಕೊಂಡು ಹೋದ ಸಹನಿರ್ದೇಶಕ ಅಂಜನಪ್ಪನೇ ಕಾರಣ ಎಂದು ವಿಡಿಯೋ ರೆಕಾರ್ಡ್ ಮಾಡಿ ತಾಯಿಮಗಳು ವಿಷ ಕುಡಿದಿದ್ದರು, ಈ ವಿಚಾರವಾಗಿ ಸಹನಟಿ ವಿಜಯಲಕ್ಷ್ಮೀ ಸಾಕುತಂದೆ ಸಹನಟ ಮಹದೇವಸ್ವಾಮಿ ಮಾದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Facebook Comments

Sri Raghav

Admin