ಸಂಜನಾ ಗಲ್ರಾನಿ ಸೋದರಿ ನಟಿ ನಿಕ್ಕಿಗೆ ಕೊರೊನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.14-ಕೊರೊನಾ ಸೋಂಕು ಸಿನಿಮಾ ತಾರೆಯರನ್ನು ಬೆಂಬಿಡದಂತೆ ಕಾಡುತ್ತಿದ್ದು, ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿಯ ತಂಗಿ, ನಟಿ ನಿಕ್ಕಿ ಗಲ್ರಾನಿಗೂ ಕೊರೊನಾ ಪಾಸಿಟಿವ್ ಬಂದಿದೆ.

ಟ್ವಟ್ಟರ್ ಮೂಲಕ ಕೊರೊನಾ ಸೋಂಕು ತಗುಲಿರುವುದನ್ನು ದೃಢಪಡಿಸಿರುವ ನಿಕ್ಕಿ, ನನಗೆ ಕಳೆದ ವಾರವೇ ಕೊರೊನಾ ಪಾಸಿಟಿವ್ ಬಂದಿತ್ತು, ಆದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈಗ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೊರೊನಾವನ್ನು ತಡೆಯಲು ಸ್ವಚ್ಛತೆ ಬಹಳ ಮುಖ್ಯ ಇದರೊಂದಿಗೆ ಮಾಸ್ಕ್ , ಸ್ಯಾನಿಟೈಸರ್‍ಗಳನ್ನು ಬಳಸುವುದು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡರೆ ಈ ರೋಗದಿಂದ ದೂರ ಉಳಿಯಬಹುದು ಎಂದು ನಿಕ್ಕಿ ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

1983 ಎಂಬ ಮಲಯಾಳಂ ಚಿತ್ರದಿಂದ ಸಿನಿಮಾಯಾನ ಆರಂಭಿಸಿದ ನಿಕ್ಕಿ, ಕನ್ನಡದ ಜಂಬೂ ಸವಾರಿ, ಸಿದ್ಧಾರ್ಥ, ಓ ಪ್ರೇಮವೇ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ.

Facebook Comments

Sri Raghav

Admin