‘ಮಾದಕ’ ನಟಿಯರಾದ ರಾಗಿಣಿ, ಸಂಜನಾರ ಆಪ್ತರು ಸಿಸಿಬಿ ಖೆಡ್ಡಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.3- ಮಾದಕ ಜಾಲದ ಮೇಲೆ ಸಮರ ಸಾರಿರುವ ಬೆಂಗಳೂರು ಪೊಲೀಸರು ಕನ್ನಡ ಚಿತ್ರನಟಿ ರಾಗಿಣಿ ಆಪ್ತ ರವಿಶಂಕರ್ ವಶಕ್ಕೆ ಪಡೆದ ಬೆನ್ನಲ್ಲೇ ಮತ್ತೊಬ್ಬ ನಟಿ ಸಂಜನ ಗಲ್ರಾನಿಯ ಅವರ ಆಪ್ತ ರಾಹುಲ್‍ನನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಹೀಗೆ ಸಿಸಿಬಿ ಪೊಲೀಸರು ದಿನಕ್ಕೊಬ್ಬರಂತೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುತ್ತಿದ್ದಂತೆ ತಮಗೂ ಇದೇ ಪರಿಸ್ಥಿತಿ ಎದುರಾಗಬಹುದೆಂಬ ಭೀತಿಯಿಂದಾಗಿ ಸುಮಾರು 15ಕ್ಕೂ ಹೆಚ್ಚು ಹಿಟ್ ಲಿಸ್ಟ್‍ನಲ್ಲಿರುವ ನಟನಟಿಯರು ರಾತ್ರೋರಾತ್ರಿ ಬೆಂಗಳೂರು ಖಾಲಿ ಮಾಡಿದ್ದಾರೆ.

ಹೊರರಾಜ್ಯಗಳಿಂದ ವಿದೇಶಕ್ಕೆ ಪರಾರಿಯಾಗಬಹುದೆಂಬ ಹಿನ್ನೆಲೆಯಲ್ಲಿ ಈಗಾಗಲೇ ಎನ್‍ಸಿಬಿ ಅಧಿಕಾರಿಗಳು ಕೆಲವು ಪ್ರಮುಖ ವಿಮಾನ ನಿಲ್ದಾಣಗಳಿಗೆ ಗೌಪ್ಯವಾಗಿ ಲುಕ್‍ಔಟ್ ನೋಟಿಸ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್‍ವುಡ್‍ನ ಸುಮಾರು 20ರಿಂದ 25ಕ್ಕೂ ಹೆಚ್ಚು ಕಲಾವಿದರು ಶಾಮೀಲಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬುಧವಾರ ರಾತ್ರಿ ನವದೆಹಲಿಯಲ್ಲಿ ಅಹಮದ್ ಎಂಬ ಡ್ರಗ್ ಪೆಡ್ಲರ್‍ನನ್ನು ಬಂಧಿಸಲಾಗಿತ್ತು.

ಇದರ ನಡುವೆ ನಿನ್ನೆ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 1 ಕೋಟಿಗೂ ಅಧಿಕ ಬೆಲೆ ಬಾಳುವ ಮಾದಕ ವಸ್ತುಗಳನ್ನು ವಲಸೆ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈಗಾಗಲೇ ಸಿಸಿಬಿ ಮತ್ತು ಎನ್‍ಸಿಬಿ ವಶದಲ್ಲಿರುವ ಆರೋಪಿಗಳು ನೀಡಿರುವ ಮಾಹಿತಿ ಆಧಾರದ ಮೇಲೆ ತನಿಖಾಧಿಕಾರಿಗಳು ಒಬ್ಬೊಬ್ಬರನ್ನೇ ಕರೆದು ವಿಚಾರಣೆಗೆ ಒಳಪಡಿಸಿದ್ದಾರೆ.

ನಿನ್ನೆ ರಾಗಿಣಿ ಆಪ್ತ ರವಿಶಂಕರ್‍ನನ್ನು ವಶಕ್ಕೆ ಪಡೆದ ಬೆನ್ನಲ್ಲೇ ತಡರಾತ್ರಿ ನಟಿ ಸಂಜನ ಗಲ್ರಾನಿಯ ಆಪ್ತ ರಾಹುಲ್‍ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಈತನಿಗೆ ಸೇರಿದ ಇನೋವಾ ಕಾರು, ಸಿಡಿ, ಹಾರ್ಡ್ ಡಿಸ್ಕ್ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.  ಮೂಲಗಳ ಪ್ರಕಾರ ರಾಹುಲ್ ಕಳೆದ ಹಲವು ತಿಂಗಳಿನಿಂದ ದಕ್ಷಿಣ ಭಾರತದ ಪ್ರಮುಖ ಕಲಾವಿದರಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಎಂದು ಎನ್‍ಸಿಬಿ ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿತ್ತು.

ಮುಂಬೈ , ಗೋವಾ, ಚೆನ್ನೈ, ಹೈದರಾಬಾದ್ ಸೇರಿದಂತೆ ದೇಶದ ಮತ್ತಿತರ ನಗರಗಳಿಂದ ಕಾನೂನು ಬಾಹಿರವಾಗಿ ಬೆಂಗಳೂರಿಗೆ ಕೊಕೈನ್, ಅಫೀಮು, ಮರಿಜೋನಾವಾ, ಗಾಂಜಾ ಪೂರೈಕೆ ಮಾಡುವ ಮಧ್ಯವರ್ತಿಯಾಗಿದ್ದ ಎಂದು ತಿಳಿದುಬಂದಿದೆ.  ಎನ್‍ಸಿಬಿ ಮತ್ತು ಸಿಸಿಬಿ ವಶದಲ್ಲಿರುವ ಆರೋಪಿಗಳು ನೀಡಿದ ಮಾಹಿತಿಯಂತೆ ಚಿತ್ರನಟಿ ರಾಗಿಣಿ ಅವರ ಆಪ್ತ ರವಿಶಂಕರ್, ಮತ್ತೊಬ್ಬ ಸಂಜನ ಗುಲ್ರಾನಿಯ ಆಪ್ತ ರಾಹುಲ್ ಅವರುಗಳನ್ನು ವಶಕ್ಕೆ ಪಡೆಯಲಾಗಿದೆ.

# ರಾತ್ರೋರಾತ್ರಿ ಪರಾರಿ:
ಇನ್ನು ಸಿಸಿಬಿ ಪೊಲೀಸರು ತಮಗೆ ಯಾವುದೇ ಕ್ಷಣದಲ್ಲಿ ನೋಟಿಸ್ ನೀಡಬಹುದು ಇಲ್ಲವೇ ಬಂಧಿಸಬಹುದೆಂಬ ಭೀತಿಯಿಂದಾಗಿ ಸುಮಾರು 15ರಿಂದ 20 ಕಲಾವಿದರು ರಾತ್ರೋರಾತ್ರಿ ಬೆಂಗಳೂರು ಬಿಟ್ಟು ಪರಾರಿಯಾಗಿದ್ದಾರೆ. ನಟ-ನಟಿಯರು, ನಿರ್ಮಾಪಕರು, ಸಂಗೀತ ನಿರ್ದೇಶಕರು, ಕಿರಿತೆರೆ ಕಲಾವಿದರು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ನಟಿ ರಾಗಿಣಿಗೆ ನೋಟಿಸ್ ನೋಡುತ್ತಿದ್ದಂತೆ ಬೆಂಗಳೂರು ಬಿಟ್ಟು ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪೆÇಲೀಸರು ತಮ್ಮನ್ನು ಬಂಧಿಸಿದರೆ ಸಮಾಜದಲ್ಲಿ ಮರ್ಯಾದೆ ಹೋಗುವುದರ ಜೊತೆಗೆ ಚಿತ್ರರಂಗದಲ್ಲಿ ಮತ್ತೆ ಅವಕಾಶಗಳು ಸಿಗುವುದಿಲ್ಲ ಎಂಬ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಆದರೂ ಬೆನ್ನು ಬಿಡದ ಪೆÇಲೀಸರು ಡ್ರಗ್ಸ್ ದಂಧೆಯಲ್ಲಿರುವ ಎಲ್ಲರ ಹೆಡೆಮುರಿ ಕಟ್ಟಲು ಮುಂದಾಗಿದ್ದಾರೆ.

Facebook Comments