ಸಂಜನಾಗೆ ಇಂದೂ ಮುಂದುವರೆದ ಸಿಸಿಬಿ ಡ್ರಿಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.16- ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಅವರ ವಿಚಾರಣೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದಾರೆ.
ಸಂಜನಾ ಅವರ ಪೊಲೀಸ್ ಕಸ್ಟಡಿ ಇಂದು ಮುಗಿಯುವ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ತಲೆ ಮರೆಸಿಕೊಂಡಿರುವ ಶೇಖ್ ಫಾಝಿಲ್ ಎಲ್ಲಿದ್ದಾನೆ, ಆತನ ಚಟುವಟಿಕೆಗಳೇನು, ಕ್ಯಾಸಿನೋ ಪಾರ್ಟಿಗೆ ಯಾರ್ಯಾರನ್ನು ಕರೆದೊಯ್ಯುತ್ತಿದ್ದ ಎಂಬಿತ್ಯಾದಿಗಳ ಬಗ್ಗೆ ಸಂಜನಾ ಅವರಿಂದ ಉತ್ತರ ಪಡೆಯುತ್ತಿದ್ದಾರೆ.

ಆದಿತ್ಯ ಆಳ್ವಾ ಅವರ ವಿಶಾಲವಾದ ಭವ್ಯ ಬಂಗಲೆಯಲ್ಲಿ ಪಾರ್ಟಿಗಳು ನಡೆಯುತ್ತಿತ್ತೇ , ನೀವೇನಾದರೂ ಆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಿರಾ, ಕ್ಯಾಸಿನೋಗೆ ಯಾವ್ಯಾಗ ಹೋಗಿದ್ದಿರಿ, ಯಾರ್ಯಾರು ಬಂದಿದ್ದರು, ಯಾವ ಯಾವ ಸ್ಥಳಗಳಲ್ಲಿ ಕ್ಯಾಸಿನೋ ನಡೆಯುತ್ತಿತ್ತು ಎಂಬಿತ್ಯಾದಿ ಅಂಶಗಳ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೈ ನಿಮ್ಮ ಸ್ನೇಹಿತರೇ ಅಥವಾ ಪರಿಚಯಸ್ಥರೇ, ಅವರು ಯಾವ ಯಾವ ಪಾರ್ಟಿಗೆ ಬರುತ್ತಿದ್ದರು, ಬೇರೆ ಇನ್ಯಾವ ನಟ-ನಟಿಯರು ಬರುತ್ತಿದ್ದರು ಎಂಬುದರ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದಾರೆ. ಸ್ಯಾಂಡಲ್‍ವುಡ್‍ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸಂಜನಾ ಅವರ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿ ಅವರನ್ನು ಬಂಧಿಸಿದ್ದಾರೆ.

Facebook Comments