ನಟಿ ಸಂಜನಾಗೂ ಟೆನ್ಷನ್ ಟೆನ್ಷನ್ ಟೆನ್ಷನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.5- ಡ್ರಗ್ಸ್ ಜಾಲದಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ ಬಂಧನವಾದ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಗೂ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ.

ಈಗಾಗಲೇ ನಟಿ ಸಂಜನಾ ಗಲ್ರಾನಿ ಆಪ್ತ ರಾಹುಲ್‍ನನ್ನು ಖೆಡ್ಡಾಕ್ಕೆ ಕೆಡವಿದ ಸಿಸಿಬಿ ಸದ್ಯ ಯಾವುದೇ ಕ್ಷಣದಲ್ಲಾದರೂ ಸಂಜನಾ ಗಲ್ರಾನಿಗೂ ನೋಟಿಸ್ ನೀಡಲಿದೆ ಎಂದು ಹೇಳಲಾಗುತ್ತಿದೆ.

ನಿನ್ನೆ ರಾಹುಲ್‍ನನ್ನು ಸಿಸಿಬಿ ಅಧಿಕಾರಿಗಳು ಕೋರ್ಟ್‍ಗೆ ಹಾಜರುಪಡಿಸಿ 5 ದಿನಗಳ ಕಾಲ ವಶಕ್ಕೆ ಪಡೆ ದಿದ್ದಾರೆ. ಈತ ಹಲವಾರು ಪಾರ್ಟಿ ಆಯೋಜಕ ನಾಗಿದ್ದ. ಹಾಗೆಯೇ ಸಂಜನಾ ಗಲ್ರಾನಿ ಜೊತೆ ಪಾರ್ಟಿ, ವಿದೇಶ ಪ್ರಯಾಣ ಹೀಗೆ ಹಲವು ಕಡೆ ಸುತ್ತಾಡಿದ್ದಾನೆ.

ಅಷ್ಟು ಮಾತ್ರವಲ್ಲದೆ ಸಂಜನಾ ಮನೆಯಲ್ಲಿ ಹಲವಾರು ಬರ್ತಡೇ ಪಾರ್ಟಿ, ಸಂಜಾನ ಜೊತೆ ಟಿಕ್‍ಟಾಕ್‍ನಲ್ಲಿ ಕುಣಿದಾಟ ಹೀಗೆ ಹಲವಾರು ರೀತಿಯಲ್ಲಿ ನಂಟು ಹೊಂದಿದ್ದ ಎನ್ನಲಾಗಿದೆ.

ಸಿಸಿಬಿ ವಶದಲ್ಲಿರುವ ಸಂಜನಾ ಆಪ್ತ ರಾಹುಲ್ ವಿಚಾರಣೆಯ ವೇಳೆ ಆತ ಕೆಲ ಹೆಸರುಗಳನ್ನು ಹೇಳಿದ್ದಾನೆ ಎನ್ನಲಾಗಿದ್ದು, ಸಂಜನಾ ಹೆಸರು ಕೂಡ ಕೇಳಿ ಬಂದಿದೆ. ಈ ಬಗ್ಗೆ ನಟಿ ಸಿಟ್ಟಾಗಿದ್ದರು. ಈಗ ಕೇಳಿ ಬರುತ್ತಿರುವ ವಿಚಾರ ಎಂದರೆ ರಾಹುಲ್ ನೀಡಿದ ಮಾಹಿತಿ ಆಧಾರದ ಮೇಲೆ ಸಂಜನಾಗೆ ನೋಟಿಸ್ ನೀಡಲು ಸಿಸಿಬಿ ಸಿದ್ಧತೆ ಮಾಡಿಕೊಂಡಿದೆ ಎಂಬುದು.
ರಾಹುಲ್ ತುಂಬಾ ಪಾರ್ಟಿ ಮಾಡ್ತಾನೆ.

ಏನೋ ಹುಡುಗಾಟದಲ್ಲಿ ಆತನನ್ನು ಕರೆದೊಯ್ದಿದ್ದಾರೆ ಅಂದುಕೊಂಡಿದ್ದೆ. ಆದರೆ ಇದುವರೆಗೂ ಆತನನ್ನು ಬಿಡುಗಡೆ ಮಾಡಿಲ್ಲ. ಆತನ ತಂದೆ, ತಾಯಿ ತುಂಬ ಒಳ್ಳೆಯವರು. ತಂದೆ ಹಾರ್ಟ್ ಪೇಷೆಂಟ್. ಆದರೆ, ಆತ ತಪ್ಪು ಮಾಡಿದ್ರೆ ನನ್ನನ್ಯಾಕೆ ಬಲಿ ಕಾ ಬಕ್ರಾ ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ನಿನ್ನೆ ಸಂಜನಾ ನಿನ್ನೆ ಹೇಳಿದ್ದರು.

ಸಿಸಿಬಿ ಪೊಲೀಸರು ಹೇಳುವ ಪ್ರಕಾರ ರಾಹುಲ್ ಡ್ರಗ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದಾನೆ. ಈತ ನಟಿ ಸಂಜನಾ ಆಪ್ತನಾಗಿದ್ದು, ಈಗಲೂ ರಾಹುಲ್ ತುಂಬಾ ಒಳ್ಳೆಯವನು ಎಂದು ಸಂಜನಾ ಹೇಳುತ್ತಿದ್ದಾರೆ. ನಿನ್ನೆ ರಾಹುಲ್‍ನನ್ನು ಸಂಜನಾ ಮನೆಗೆ ಕರೆತರಲು ಸಿಸಿಬಿ ಪೊಲೀಸರು ಬಂದಿದ್ದರು ಎನ್ನಲಾಗಿದೆ.

ಆದರೆ ಮಾಧ್ಯಮಗಳನ್ನು ಕಂಡು ರಾಹುಲ್‍ನ್ನು ಕಾರಿನಿಂದ ಇಳಿಸದೇ ಹಾಗೇ ವಾಪಸ್ ಕರೆದೊಯ್ದಿದ್ದರು. ರಾಹುಲ್ ನೀಡಿರುವ ಮಾಹಿತಿ ಮೇರೆಗೆ ವಿಚಾರಣೆಗೆ ಬರುವಂತೆ ಸಂಜನಾಗೆ ನೊಟೀಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿನ್ನೆ ಸಿಸಿಬಿ, ರಾಹುಲ್‍ನನ್ನು ಸಂಜನಾ ಮನೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದೆ. ನಟಿ ಸಂಜನಾ ಜೊತೆ ನಿಕಟ ಸಂಬಂಧ ಇರುವ ಕಾರಣ ಸಿಸಿಬಿ ಪೊಲೀಸರು ಸಂಜನಾಗೆ ನೋಟಿಸ್ ನೀಡಲು ತಯಾರಿ ನಡೆಸಿದ್ದು, ಯಾವುದೇ ವೇಳೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ತಿಳಿಸುವ ಸಾಧ್ಯತೆ ಇದೆ.

Facebook Comments