ಐಎಎಸ್ ಅಧಿಕಾರಿ ಜೊತೆ ಸಂಜನಾ ಲಿಂಕ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಡ್ರಗ್ಸ್ ಜಾಲದಲ್ಲಿ ನಟಿ ರಾಗಿಣಿ ದ್ವಿವೇದಿ ಬಂಧನವಾಗುತ್ತಿದ್ದಂತೆ ಮತ್ತೊಬ್ಬ ನಟಿ ಸಂಜನಾ ಗಲ್ರಾನಿಯನ್ನು ರಕ್ಷಣೆ ಮಾಡಲು ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ಸಿಸಿಬಿ ಪೊಲೀಸರು ತನಿಖೆ ಕೈಗೆತ್ತಿಕೊಂಡು ರಾಗಿಣಿಯನ್ನು ಬಂಧಿಸುತ್ತಿದ್ದಂತೆ ಸಂಜನಾ ಗಲಿಬಿಲಿಗೆ ಒಳಗಾಗಿದ್ದು, ತನ್ನ ಪ್ರಭಾವ ಬಳಸಿ ಪ್ರಕರಣದಿಂದ ಪಾರಾಗಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಸುಮಾರು 3 ವರ್ಷದಿಂದ ಸಂಜಾನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಐಎಎಸ್ ಆಧಿಕಾರಿ ತಮಗೆ ಆಪ್ತವಾಗಿರುವ ಐಪಿಎಸ್ ಅಧಿಕಾರಿಗೆ ಕರೆ ಮಾಡಿ, ಸಂಜಾನರನ್ನು ಬಂಧಿಸದಂತೆ, ಆಕೆಯ ಮನೆ ಶೋಧ ನಡೆಸದಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಆದರೆ ಆ ವೇಳೆಗಾಗಲೇ ಸಂಜನಾ ತಾನು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ, ರೋಷಾವೇಶ ಪ್ರದರ್ಶನ ಮಾಡಿ ಅನುಮಾನ ಹುಟ್ಟುವಂತೆ ಮಾಡಿಕೊಂಡಿದ್ದರು.

ನಟಿ ರಾಗಿಣಿಯಷ್ಟೆ ಕುತುಹಲ ಸಂಜನಾರ ಕುರಿತು ಸೃಷ್ಟಿಯಾಗಿತ್ತು. ಜೊತೆಗೆ ಬಂಧಿತ ಆರೋಪಿಗಳಾದ ರವಿಶಂಕರ್ ಹಾಗೂ ಮತ್ತಿತರರು ಸಂಜನಾರ ಹೆಸರನ್ನು ಬಾಯಿ ಬಿಟ್ಟಿದ್ದರು. ದೂರವಾಣಿ ಕರೆಗಳ ಲಿಸ್ಟ್, ವಾಟ್ಸ್‍ಅಪ್ ಚಾಟ್‍ಗಳಲ್ಲೂ ಸಂಜನಾರ ವಿರುದ್ಧವಾದ ಪುರಾವೆಗಳು ದೊರೆತಿದ್ದವು. ಹೀಗಾಗಿ ಸಂಜಾನಾರ ಮನೆ ಶೋಧ ಮಾಡುವುದು ಸಿಸಿಬಿ ಪೊಲೀಸರಿಗೆ ಅನಿವಾರ್ಯವಾಗಿತ್ತು.

ಮನೆ ಶೋಧ ಮಾಡಿದ ವೇಳೆ ಐಎಎಸ್ ಅಧಿಕಾರಿಗೆ ಸೇರಿದ ಚೆಕ್‍ಗಳು ಪತ್ತೆಯಾಗಿವೆ ಎನ್ನಲಾಗಿದೆ. ವಿಧಾನಸೌಧದಲ್ಲಿ ಕೆಲಸ ಮಾಡುವ ಈ ಅಧಿಕಾರಿ ಮತ್ತು ಸಂಜನಾ ಕೆಲವು ಯೋಜನೆಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಸಂಜನಾರದ ಬಂಧನದ ಬಳಿಕ ತಮ್ಮ ಹೆಸರನ್ನು ಹೊರ ತರದಂತೆ ಪೊಲೀಸರ ಮೇಲೆ ಐಎಎಸ್ ಅಧಿಕಾರಿ ಒತ್ತಡ ಹೇರಿದ್ದಾರೆ ಎಂದು ಮೂಲಗಳು ಹೇಳಿವೆ.

ಈವರೆಗೆ ಚಿತ್ರರಂಗದವರು ಮತ್ತು ರಾಜಕಾರಣದ ಪ್ರಮುಖರ ಜೊತೆಗಷ್ಟೆ ಸಂಜನಾರ ಹೆಸರು ಥಳಕು ಹಾಕಿಕೊಂಡಿತ್ತು. ಹೀಗ ಐಎಎಸ್ ಅಧಿಕಾರಿಯೊಂದಿಗೂ ಜೊಡಣೆಗೊಳ್ಳುವ ಮೂಲಕ ಡ್ರಗ್ಸ್ ಜಾಲಕ್ಕೆ ಹೊಸ ತಿರುವುದು ಬಂದಿದೆ.

Facebook Comments