‘ಬಾಲಿವುಡ್‍ನ ಖ್ಯಾತ ನಟಿ ಶ್ರೀದೇವಿ ಸಾವು ಆಕಸ್ಮಿಕವಲ್ಲ ಕೊಲೆ’..!

ಈ ಸುದ್ದಿಯನ್ನು ಶೇರ್ ಮಾಡಿ

ತಿರುವನಂತಪುರಂ,ಜು.12- ಬಾಲಿವುಡ್‍ನ ಖ್ಯಾತ ಹಿರಿಯ ನಟಿ ಶ್ರೀದೇವಿಯವರದು ಸಹಜ ಸಾವಲ್ಲ. ಅದೊಂದು ಕೊಲೆ ಎಂದು ಕೇರಳ ಕೇಡರ್‍ನ ಐಪಿಎಸ್ ಅಧಿಕಾರಿ ರಿಷಿರಾಜ್ ಸಿಂಗ್ ಹೇಳುವ ಮೂಲಕ ಶ್ರೀದೇವಿ ಸಾವಿನ ಪ್ರಕರಣದ ಬಗ್ಗೆ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯೊಂದರ ಸಂದರ್ಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಅವರು, ನಟಿ ಸಾವು ಕೊಲೆ ಎಂದು ಸಾಬೀತುಪಡಿಸಲು ಸಾಂದರ್ಭಿಕ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ. ವಿಧಿವಿಜ್ಞಾನ ತಜ್ಞರಾದ ತಮ್ಮ ಸ್ನೇಹಿತ ಉಮದತನ್ ಅವರು, ನಟಿ ಶ್ರೀದೇವಿಯವರು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ.

ಅವರು ಕೊಲೆಯಾಗಿರುವ ಸಾಧ್ಯತೆಗಳಿವೆ ಎಂದು ಕೊಲೆಯಾದ ಜಾಗದ ಸುತ್ತಮುತ್ತಲಿನ ಸಾಕ್ಷಿಗಳ ಬಗ್ಗೆ ಮಾತನಾಡಿದ್ದರು ಎಂದು ರಿಷಿರಾಜ್ ತಿಳಿಸಿದ್ದಾರೆ. ಶ್ರೀದೇವಿ ಅವರ ಶವಪರೀಕ್ಷೆ ನಡೆಸಿದ್ದ ತನ್ನ ಸ್ನೇಹಿತ ದಿವಂಗತ ಡಾ.ಉಮದತನ್, ಯಾವುದೇ ವ್ಯಕ್ತಿಯು ಒಂದು ಅಡಿ ಆಳದಲ್ಲಿ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ.

ಶ್ರೀದೇವಿ ಅವರು ಫೆ.24ರಂದು ದುಬೈನ ಹೋಟೆಲ್‍ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆದರೆ ಅವರ ಸಾವು ಅಪಘಾತ ಎಂದು ವರದಿ ಮಾಡಲಾಗಿದೆಯಷ್ಟೇ ಎಂದಿದ್ದರು. ಪಾನಮತ್ತರಾದವರು ಯಾರೇ ಆದರೂ ಬಾತ್‍ಟಬ್‍ನಲ್ಲಿ ಒಂದು ಅಡಿ ಆಳದಲ್ಲಿ ಮುಳುಗಲು ಸಾಧ್ಯವಿಲ್ಲ. ಬಾಹ್ಯ ದಬ್ಬಿಕೆ ಇಲ್ಲದೆ ಯಾರೂ ಕೂಡ ಬಾತ್‍ಟಬ್‍ನಲ್ಲಿ ಮುಳುಗುವುದು ಅಸಾಧ್ಯ ಎಂದು ಉಮದತನ್ ತಿಳಿಸಿದ್ದ ಎಂದು ಅವರು ಹೇಳಿದ್ದಾರೆ.

ಸ್ನೇಹಿತ ಉಮದತನ್ ನಟಿ ಸಾವಿನ ಬಗ್ಗೆ ಪ್ರಸ್ತಾಪಿಸಿ, ಶ್ರೀದೇವಿ ಸಾವು ಆಕಸ್ಮಿಕವಲ್ಲ ಎಂದು ಸಾಬೀತುಪಡಿಸಲು ಹಲವಾರು ಸಾಂದರ್ಭಿಕ ಪುರಾವೆಗಳನ್ನು ತೋರಿಸಿದ್ದರು ಎಂದು ರಿಷಿರಾಜ್ ಹೇಳಿಕೊಂಡಿದ್ದಾರೆ.

ನಟಿ ಸಾವಿನ ಪ್ರಕರಣದ ಬಗ್ಗೆ ಹಲವಾರು ಮಂದಿ ಕೊಲೆ ಶಂಕೆಯನ್ನು ವ್ಯಕ್ತಪಡಿಸಿದ್ದು, ನಿವೃತ್ತ ಎಸಿಪಿ ಕೂಡ ಕೊಲೆ ಸಾಧ್ಯತೆಯನ್ನು ಎತ್ತಿಹಿಡಿದಿದ್ದರು. ದೆಹಲಿಯ ನಿವೃತ್ತ ಎಸಿಪಿ ಭೂಷಣ್ ಶರ್ಮ ಕೂಡ ನಟಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಖಾಸಗಿ ತನಿಖೆ ಏಜೆನ್ಸಿ ಹೊಂದಿರುವ ಭೂಷಣ್ ಅವರಿಗೆ ಶ್ರೀದೇವಿ ಅವರ ಕೊಠಡಿಯನ್ನು ಪ್ರವೇಶಿಸಲು ಅವಕಾಶ ನೀಡಿರಲಿಲ್ಲ . ಇದರಿಂದ ನಟಿ ಸಾವಿನ ಸುತ್ತ ಹಲವು ಅನುಮಾಗಳು ಮೂಡಿದ್ದವು ಎಂದು ಭೂಷಣ್ ಕೂಡ ಕೊಲೆ ಶಂಕೆ ವ್ಯಕ್ತಪಡಿಸಿದ್ದರು.

Facebook Comments

Sri Raghav

Admin