ಬ್ರೇಕಿಂಗ್ : ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನ..!

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ : ಚಿತ್ರರಂಗದ ತಾರೆಯರಿಗೆ ಏನಾಗಿದೆ ಸ್ವಾಮಿ… ಒಬ್ಬರಿಂದೊಬ್ಬರು ಜೀವದ ಬೆಲೆಯನ್ನು ಅರಿಯದೆ ಸಾಯಲು ನಿರ್ಧಾರ ಮಾಡಿರುವುದು ಸರಿಯೇ. ಈಗ ನಾಗಮಂಡಲ ಚಿತ್ರ ಖ್ಯಾತಿಯ ವಿಜಯಲಕ್ಷ್ಮಿ ತಮ್ಮ ಟ್ವಿಟರ್ ನಲ್ಲಿ ಇದು ನನ್ನ ಕೊನೆಯ ವೀಡಿಯೋ ಅಂತ ಪೋಸ್ಟ್ ಮಾಡಿದ್ದಾರೆ.

ಸಾಕಷ್ಟು ದಿನಗಳಿಂದ ನಾನು ಒತ್ತಡದಲ್ಲಿದ್ದೇನೆ ಆ ಒತ್ತಡವನ್ನ‌ ನಿಭಾಯಿಸಲಿ ಆಗ್ತಿಲ್ಲ. ಹೀಗಾಗಿ ಸಾಯಲು ಇಚ್ಛೀಸುತ್ತೇನೆ ಅಂತ ಪೋಸ್ಟ್ ಮಾಡಿರೋ ವಿಜಯಲಕ್ಷ್ಮಿ ತಮಿಳಿನಲ್ಲಿ‌ ಮಾತು ಆರಂಭಿಸಿ ಕನ್ನಡ ಮಾತನಾಡಿರೋ ನಟಿ ನಾನು ಕಷ್ಟದಲ್ಲಿ ಬಂದಿದ್ದೇನೆ.

ಕರ್ನಾಟಕದಲ್ಲಿ ಹುಟ್ಟಿರೋ ಒಂದೇ ಒಂದು ಕಾರಣಕ್ಕಾಗಿ ತಮಿಳು ನಟ ಸೀಮಾನ್ ತುಂಬಾ ಕಾಟ ಕೊಟ್ಟಿದ್ದಾರೆ.ನಾನು ಪ್ರಾಸ್ಟಿಟ್ಯೂಟ್ ಕೆಲಸ ಮಾಡ್ತಿದ್ದೇನೆ ಅಂತಾ ಬಾಳಲು ಬಿಡ್ತಿಲ್ಲ.

ಆಗ್ಲೇ ನಾನು ಮೂರು ಬಿಪಿ ಟ್ಯಾಬ್ಲೆಟ್ ತೆಗೆದುಕೊಂಡಿದ್ದೇನೆ, ಬಿಪಿ ಡೌನ್ ಆಗುತ್ತೇ ಇನ್ನೂ ಕೆಲ‌ ಕ್ಷಣಗಳಲ್ಲಿ ನನ್ನ ಸಾವಿಗೆ ಕಾರಣರಾದ ಸೀಮಾನ್ , ಹರಿನಾಳ್ ಅನ್ನುವವರನ್ನ‌ ಬಿಡಬೇಡಿ‌ ಕನ್ನಡದವರು. ಇದು ನನ್ನ‌ ಕೊನೆಯ ವಿಡಿಯೋ ಅಂತಾ ಪೋಸ್ಟ್ ಹಾಕಿರೋ ವಿಜಯಲಕ್ಷ್ಮಿ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಜಯಲಕ್ಷ್ಮೀ ಅವರನ್ನು ಅವರ ಕುಟುಂಬದವರು ಹಾಗೂ ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ನಟಿ ಪ್ರಾಣಾಪಾಯದಿಂದ ಪಾರಾಗಿದ್ದು ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸಾಕಷ್ಟು ಸಮಯಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ನಟಿ ವಿಜಯಲಕ್ಷ್ಮೀ ಅವರು ಒತ್ತಡವನ್ನು ತಾಳಲಾಗದೇ ಈ ನಿರ್ಧಾರಕ್ಕೆ ಬಂದಿರಬಹುದೆಂದು ಎನ್ನಲಾಗಿದೆ.

Facebook Comments

Sri Raghav

Admin