ನಂಜನಗೂಡಲ್ಲಿ ನೆರೆಪೀಡಿತ ಪ್ರದೇಶಗಳಿಗೆ ನಟ ಚೇತನ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು, ಆ.12- ಪಟ್ಟಣದ ನಂಜುಂಡೇಶ್ವರ ದೇವಾಲಯದ ತಗ್ಗು ಪ್ರದೇಶಗಳಲ್ಲಿ ಮನೆಗಳು ಮುಳುಗಡೆಯಾಗಿರುವ ಸ್ಥಳಕ್ಕೆ ನಟ ಚೇತನ್ ಭೇಟಿ ನೀಡಿ ವೀಕ್ಷಿಸಿದರು. ಪಟ್ಟಣದ ಕುರುಬಗೇರಿ, ಒಕ್ಕಲಗೇರಿ, ತೋಪಿನಬೀದಿ, ಚಾಮಲಪುರದಹುಂಡಿ, ಸರಸ್ವತಿ ಕಾಲೋನಿ ಇನ್ನೂ ಅನೇಕ ಬಡಾವಣೆಗಳಿಗೆ ಭೇಟಿ ನೀಡಿದ ಅವರು, ನಂತರ ನೇರವಾಗಿ ಗಂಜಿ ಕೇಂದ್ರಗಳಿಗೆ ತೆರಳಿ ಸಂತ್ರಸ್ತರ ಜತೆ ಮಾತುಕತೆ ನಡೆಸಿದರು.

ಈಗಾಗಲೇ ಕಪಿಲಾನದಿಯ ಆರ್ಭಟಕ್ಕೆ ಕರ್ನಾಟಕದ ನಂಜನಗೂಡಿನಲ್ಲಿ ಸಾವಿರಾರು ಕುಟುಂಬಗಳು ಆಸ್ತಿ-ಪಾಸ್ತಿ, ಮನೆ ಕಳೆದುಕೊಂಡು ಬೀದಿಗೆ ಬಿದ್ದಿವೆ. ಈಗಾಗಲೇ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಜತೆ ಮಾತುಕತೆಯಾಡಿ ಮನೆ, ಆಸ್ತಿ ಕಳೆದುಕೊಂಡು ಗಂಜಿಕೇಂದ್ರದಲ್ಲಿ ದಿನ ದೂಡುತ್ತಿರುವ ಸಂತ್ರಸ್ತರ ಜೀವನ ಮತ್ತು ಮಕ್ಕಳ ಭವಿಷ್ಯ ರೂಪಿಸಲು ಖಂಡಿತ ಕೈ ಜೋಡಿಸುತ್ತೇವೆ ಎಂದರು.

ಗಂಜಿಕೇಂದ್ರದಲ್ಲಿ ಸಂತ್ರಸ್ತರಿಗೆ ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಿದೆ ಎಂದು ಸಂತ್ರಸ್ತರು ತಿಳಿಸಿದರು.ಎಲ್ಲ ಕಡೆ ಸಂತ್ರಸ್ತರ ಪರವಾಗಿ ನಿಂತು ಸಹಕಾರ ನೀಡಲು ಮುಂದಾಗುತ್ತೇವೆ ಎಂದು ಸಂದರ್ಭದಲ್ಲಿ ನಟ ಚೇತನ್ ತಿಳಿಸಿದರು.

ರಾಜ್ಯ ವೀರಶೈವ ವೇದಿಕೆಯ ಅಧ್ಯಕ್ಷ ಶಿವಮಹದೇವಪ್ಪ, ಹಳೆಪುರ ಗಿರೀಶ್, ಚಿತ್ರನಟಿ ಸಿಂಧುರಾವ್, ಬಾಳ್ಯರ್ ಹೇಮಂತ್, ನೇರಳೆ ನಾಗೇಶ್, ಪುಟ್ಟಸ್ವಾಮಿ, ನಿಂಗರಾಜು, ಮಂಜು, ಎಚಗಳ್ಳಿ ಮಹೇಶ, ಶಂಕರಪುರದ ಸುರೇಶ್, ಹಗಿನವಾಳು ಚಿಕ್ಕಣ್ಣ, ತಗಡು ಸತೀಶ್, ಹುಲ್ಲಹಳ್ಳಿ ಗುರುರಾಜ್ ಪಟೇಲ್ ಇದ್ದರು.

Facebook Comments

Sri Raghav

Admin