ಸಿಎಂ ಬಿಎಸ್‌ವೈಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.23- ಕೊನೆಗೂ ರಾಜ್ಯ ಸರ್ಕಾರ ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರದ ಅನುಮತಿ ಗಿಟ್ಟಿಸಿದೆ. ಹೆಚ್ಚುವರಿ ಸಾಲ ಪಡೆಯಬೇಕಾದರೆ ಇದ್ದ ಕಠಿಣ ಷರತ್ತುಗಳನ್ನು ಈಡೇರಿಸಿ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿರುವುದರಿಂದ ಇದೀಗ ಕರ್ನಾಟಕಕ್ಕೆ ಹೆಚ್ಚುವರಿ ಸಾಲ ಪಡೆಯುವ ಹಾದಿ ಸುಗಮವಾಗಿದೆ.

ಹೆಚ್ಚುವರಿ ಸಾಲ ಪಡೆಯಬೇಕಾದರೆ ಕೆಲ ಕ್ಷೇತ್ರಗಳಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಕಠಿಣ ಷರತ್ತನ್ನು ಈಡೇರಿಸುವುದು ಕಡ್ಡಾಯವಾಗಿತ್ತು. ಅದರಂತೆ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವಲ್ಲಿ ಸಫಲವಾಗಿರುವ ಹಿನ್ನೆಲೆ ರಾಜ್ಯ ಇದೀಗ ಹೆಚ್ಚುವರಿ ಸಾಲ ಪಡೆಯಲು ಕೇಂದ್ರದ ಒಪ್ಪಿಗೆ ಪಡೆದಿದೆ.

ಹೆಚ್ಚುವರಿ ಸಾಲ ಮಾಡಲು ಇರುವ ಷರತ್ತು ಏನು?:
ಲಾಕ್‍ಡೌನ್‍ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ಮನಗಂಡು ಕೇಂದ್ರ ಸರ್ಕಾರ ಸಾಲದ ಮಿತಿಯನ್ನು ಶೇ.3ರಿಂದ 5ಕ್ಕೆ ಏರಿಕೆ ಮಾಡಿತ್ತು. ಆದರೆ, ಕೇಂದ್ರ ಸಾಲದ ಮಿತಿಯನ್ನೇನೋ ವಿಸ್ತರಿಸಿದೆ. ಆದರೆ, ಹೆಚ್ಚುವರಿ ಸಾಲ ಪಡೆಯಬೇಕಾದರೆ ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಕೆಲ ಕಠಿಣ ಷರತ್ತುಗಳಿದ್ದವು.

ಅದರಂತೆ 3.5% ರಿಂದ 4.5% ವರೆಗಿನ 1% ಸಾಲವನ್ನು ಮಾರುಕಟ್ಟೆಯಿಂದ ಎತ್ತುವಳಿ ಮಾಡಬೇಕಾದ್ರೆ ರಾಜ್ಯ ಕೆಲ ಕಠಿಣ ಷರತ್ತನ್ನು ಪಾಲಿಸಬೇಕು. ಈ ಶೇ.1ರಷ್ಟರ ಸಾಲ 0.25% ರಂತೆ ನಾಲ್ಕು ಹಂತಗಳಲ್ಲಿ ಲಭ್ಯವಾಗಲಿದೆ. ಈ ಪ್ರತಿ ನಾಲ್ಕು ಹಂತಗಳ ಸಾಲ ಲಭಿಸಬೇಕಾದ್ರೆ ನಿಗದಿತ, ಕಾರ್ಯಸಾಧು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಕೊನೆಯ 0.5% ಸಾಲ ಪಡೆಯಬೇಕಾದ್ರೆ ನಾಲ್ಕು ಸುಧಾರಣೆ ಷರತ್ತುಗಳ ಪೈಕಿ ಮೂರನ್ನು ಸಂಪೂರ್ಣ ಸಾಸಿರಬೇಕು.

ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್, ಈಸ್ ಆಫ್ ಡೂಯಿಂಗ್ ಬ್ಯುಜಿನೆಸ್, ವಿದ್ಯುತ್ ಶಕ್ತಿ ವಿತರಣೆ, ನಗರ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ಧಿಯ ಈ ನಾಲ್ಕು ಕ್ಷೇತ್ರಗಳಲ್ಲಿ ಸುಧಾರಣೆ ತರುವ ಷರತ್ತುಗಳನ್ನು ವಿಸಲಾಗಿತ್ತು. ಈ ಷರತ್ತುಗಳನ್ನು ಈಡೇರಿಸಿದರೆ ಮಾತ್ರ ಹೆಚ್ಚುವರಿ ಸಾಲ ಪಡೆಯಬಹುದಾಗಿದೆ.

ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಈಸ್ ಆಫ್ ಡೂಯಿಂಗ್ ಬ್ಯುಜಿನೆಸ್ ಸಂಬಂಧ ಸುಧಾರಣಾ ಕ್ರಮ ಕೈಗೊಳ್ಳಲು ಸಫಲವಾಗಿದೆ. ಇದರಲ್ಲಿ ಪ್ರಮುಖವಾಗಿ ಆಸ್ತಿ ನೋಂದಣಿ, ಶಾಲೆ ಪ್ರಾರಂಭಿಸಲು ಅನುಮತಿ ಸೇರಿ ವಿವಿಧ ಇಲಾಖೆಗಳಲ್ಲಿನ ಕೆಲ ಸೇವೆಗಳನ್ನು ಆನ್‍ಲೈನ್‍ಗೆ ತಂದು ಕರ್ನಾಟಕ ಸುಧಾರಣೆ ಕ್ರಮಗಳನ್ನು ಜಾರಿಗೆ ತಂದಿದೆ.ಹೀಗಾಗಿ ಕೇಂದ್ರ ವಾಣಿಜ್ಯ ಸಚಿವಾಲಯ ಮೊದಲ ಹಂತವಾದ 0.25% ಹೆಚ್ಚುವರಿ ಸಾಲ ಪಡೆಯಲು ರಾಜ್ಯಕ್ಕೆ ಅನುಮತಿ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಅದರಂತೆ ರಾಜ್ಯದ ಜಿಎಸ್‍ಟಿ 16.52 ಲಕ್ಷ ಕೋಟಿಯಾಗಿದ್ದು, 0.25% ಸಾಲದ ಪ್ರಕಾರ ಸುಮಾರು 4,131.6 ಕೋಟಿ ರೂ. ಸಾಲವನ್ನು ಕರ್ನಾಟಕ ಎತ್ತುವಳಿ ಮಾಡಬಹುದಾಗಿದೆ. ಆ ಮೂಲಕ ಕರ್ನಾಟಕ ಸುಧಾರಣಾ ಕ್ರಮಗಳ ಅನುಷ್ಠಾನದೊಂದಿಗೆ ಹೆಚ್ಚುವರಿ ಸಾಲ ಪಡೆಯಲು ಅನುಮತಿ ಪಡೆದ ಮೊದಲ ರಾಜ್ಯವಾಗಿದೆ ಎಂದು ಆರ್ಥಿಕ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯೋಜನೆಯನ್ನೂ ಜಾರಿಗೆ ತರಲಾಗಿದ್ದು, ಆ ಮೂಲಕ ಸರ್ಕಾರ ಮತ್ತೊಂದು ಹಂತದ ಶೇ 0.25ರಷ್ಟು ಸಾಲ ಪಡೆಯಲು ಸಾಧ್ಯವಾಗಲಿದೆ ಎಂದು ಆರ್ಥಿಕ ಇಲಾಖೆ ಅಕಾರಿಗಳು ತಿಳಿಸಿದ್ದಾರೆ.

ಇತರ ಸುಧಾರಣಾ ಕ್ರಮಗಳಾದ ನಗರ ಸ್ಥಳೀಯ ಸಂಸ್ಥೆಗಳ ಆದಾಯ ವೃದ್ಧಿ, ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ರಾಜ್ಯಕ್ಕೆ ಲಭಿಸುವ ಹೆಚ್ಚುವರಿ ಸಾಲದ ಲೆಕ್ಕಾಚಾರ ಏನು?: ಕೇಂದ್ರ ಸರ್ಕಾರ ರಾಜ್ಯಗಳು ಮಾಡಬಹುದಾದ ಸಾಲದ ಮಿತಿಯನ್ನು ಜಿಎಸ್ಡಿಪಿಯ 3% ರಿಂದ 5%ಗೆ ಏರಿಕೆ ಮಾಡಿದೆ. ಅದರಂತೆ ಕರ್ನಾಟಕಕ್ಕೆ 82,621.6 ಕೋಟಿ ರೂ. ಸಾಲ ಪಡೆಯಲು ಅನುಮತಿ ನೀಡಲಾಗಿತ್ತು. ಈ ಹೆಚ್ಚುವರಿ 2% ಸಾಲದ ಪೈಕಿ 0.5% ಸಾಲವನ್ನು ಯಾವುದೇ ಷರತ್ತು ಇಲ್ಲದೆ ಎತ್ತುವಳಿ ಮಾಡಬಹುದಾಗಿದೆ.

ರಾಜ್ಯ ಸರ್ಕಾರ ಜಿಎಸ್ಟಿ ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಪೈಕಿ ಆಯ್ಕೆ 1ನ್ನು ಆರಿಸಿದ ಹಿನ್ನೆಲೆ ಕರ್ನಾಟಕ ಮತ್ತೆ 0.5%ರಷ್ಟು ಸಾಲವನ್ನು ಷರತ್ತು ರಹಿತವಾಗಿ ಮಾರುಕಟ್ಟೆಯಿಂದ ಎತ್ತುವಳಿ ಮಾಡಬಹುದಾಗಿದೆ.

ಉಳಿದ 1%ರಷ್ಟು ಸಾಲವನ್ನು ಕ್ಷೇತ್ರವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಮೂಲಕ ಎತ್ತುವಳಿ ಮಾಡಬೇಕಾಗಿದೆ. ಈ ಸುಧಾರಣಾ ಕ್ರಮಗಳನ್ನು ರಾಜ್ಯ ಸಾಸುವಲ್ಲಿ ಸಫಲವಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

Facebook Comments