ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಅದ್ದೂರಿ’ ನಿರ್ದೇಶಕ ಎ.ಪಿ.ಅರ್ಜುನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 10- ಕಿಸ್ ನಿರ್ದೇಶಕ ಎ.ಪಿ.ಅರ್ಜುನ್ ಅನ್ನಪೂರ್ಣ ಅವರನ್ನು ವರಿಸಿದ್ದಾರೆ. ಕೊರೋನಾ ಹಾವಳಿಯ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಚಲನಚಿತ್ರ ನಿರ್ದೇಶಕ ಎ.ಪಿ.ಅರ್ಜುನ್ ಅನ್ನಪೂರ್ಣ ಅವರನ್ನು ವಿವಾಹವಾಗಿದ್ದಾರೆ.

5 ವರ್ಷದ ನಿರಂತರದ ಪ್ರೇಮದ ಫಲವಾಗಿ ಇಂದು ನಾಗರಬಾವಿಯಲ್ಲಿರುವ ಅರ್ಜುನ್ ಅವರ ನಿವಾಸದ ಮುಂದೆ ಹಸಿರು ತೋರಣಗಳ ನಡುವೆ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಲನಚಿತ್ರಗಳಿಗೆ ಚಿತ್ರಕಥೆ , ಸಾಹಿತ್ಯ ಬರೆಯುತ್ತಾ ಭದ್ರ ನೆಲೆಯನ್ನು ಕಂಡಂತ ಅರ್ಜುನ್ ಅಂಬಾರಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಯಶಸ್ಸನ್ನು ಕಂಡರು. ತದನಂತರ ಅದ್ಧೂರಿ, ರಾಟೆ, ಹಾಗೂ ದರ್ಶನ್ ಅಭಿನಯದ ಐರಾವತ ಚಿತ್ರವನ್ನು ನಿರ್ದೇಶಿಸಿ , ಇತ್ತೀಚೆಗಷ್ಟೇ ಕಿಸ್ ಎಂಬ ಯುವ ಜೋಡಿಯ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.

ಈ ಯಶಸ್ವಿ ನಿರ್ದೇಶಕನ ಮದುವೆ ಸಮಾರಂಭಕ್ಕೆ ಚಿತ್ರ ನಟರಾದ ನೀನಾಸಂ ಸತೀಶ್ , ಧೃವ ಸಜರ್ , ನೆನಪಿರಲಿ ಪ್ರೇಮ್ , ವಿರಾಟ್ ನಿರ್ದೇಶಕರುಗಳಾದ ತರುಣ್ ಸುಧೀರ್ , ಸಂತು, ನಟಿ ಶ್ರೀಲೀಲಾ , ಛಾಯಾಗ್ರಾಹಕರಾದ ಸತ್ಯ ಹೆಗ್ಡೆ , ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯ ಸೇರಿದಂತೆ ಹಲವಾರು ಗೆಳೆಯರು ಹಾಜರಿದ್ದು ನವ ವಧು- ವರರಿಗೆ ಶುಭ ಕೋರಿದ್ದಾರೆ.

Facebook Comments

Sri Raghav

Admin