ಯೆಮೆನ್‍ನ ಹೆಡೆನ್ ವಿಮಾನ ನಿಲ್ದಾಣದ ಮೇಲೆ ದಾಳಿ : ಭಾರತ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.1- ಯೆಮೆನ್‍ನ ಹೆಡೆನ್ ವಿಮಾನ ನಿಲ್ದಾಣದ ಮೇಲೆ ಬುಧವಾರ ನಡೆದ ಮಾರಣಾಂತಿಕ ದಾಳಿ ಬಗ್ಗೆ ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಯುದ್ಧ ಪೀಡಿತ ದೇಶದಲ್ಲಿ ಹೊಸದಾಗಿ ರೂಪುಗೊಂಡ ಸರ್ಕಾರದ ಕ್ಯಾಬಿನೆಟ್ ಸಚಿವರನ್ನು ಹೊತ್ತ ವಿಮಾನದ ಹೆಡೆನ್ ವಿಮಾನ ನಿಲ್ದಾಣದಲ್ಲಿ ಇಳಿದ ಸ್ವಲ್ಪ ಹೊತ್ತಿನಲ್ಲೇ ಡ್ರೋನ್‍ನಿಂದ ದಾಳಿ ನಡೆಸಿರುವುದು ಆಘಾತಕಾರಿ ಹಾಗೂ ಇದೊಂದು ಹೇಯ ಕೃತ್ಯ ಎಂದಿದೆ.

ದಾಳಿಯಿಂದ ಸುಮಾರು 25 ಮಂದಿ ಮೃತಪಟ್ಟಿದ್ದಲ್ಲದೆ, ಅಪಾರ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ. ಪ್ರಮಾದವಶಾತ್ ಎಲ್ಲ ಮಂತ್ರಿಗಳು ಸುರಕ್ಷಿತವಾಗಿದ್ದಾರೆ. ಘಟನೆ ಬಗ್ಗೆ ಸೂಕ್ತ ಕ್ರಮಗೊಳ್ಳುವ ಮೂಲಕ ಯೆಮೆನ್‍ನಲ್ಲಿ ಶಾಂತಿ ಮತ್ತು ಸ್ಥಿರತೆ ಸಾಧಿಸುವ ಪ್ರಯತ್ನ ಮುಂದುವರಿಯಲಿ ಎಂದು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಬಯಸುತ್ತದೆ.

ಯೆಮೆನ್ ಸರ್ಕಾರ, ಜನರು ಮತ್ತು ದಾಳಿಯಲ್ಲಿ ಮಡಿದವರ ಕುಟುಂಬಗಳಿಗೆ ನಮ್ಮ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಈ ಕೃತ್ಯ ಮನ್ನಣೆಗೆ ಪಾತ್ರವಾಗಿಲ್ಲ. ಮುಗ್ಧ ನಾಗರಿಕರನ್ನು ಕೊಲ್ಲುವುದು ಸ್ವೀಕಾರ್ಹವಲ್ಲ ಹಾಗೂ ಯಾವುದೇ ಕಾರಣಗಳಿಗೂ ಅದನ್ನು ಸಮರ್ಥಿಸಲಾಗುವುದಿಲ್ಲ ಎಂದು ವಕ್ತಾರ ಅರುಣ್ ಶ್ರೀ ವಾಸ್ತವ ತಿಳಿಸಿದ್ದಾರೆ.

Facebook Comments