15 ದಿನಕ್ಕೆ 4 ಲಕ್ಷ ಸಂಬಳ ಉಡೀಸ್ ಮಾಡುತ್ತಿದ್ದ ವೀರೇನ್ ಖನ್ನಾನ ಬಲಗೈ ಭಂಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ತಿಂಗಳಿಗೆ 4 ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿ ಆದಿತ್ಯ ಅಗರ್ವಾಲ್ ಅದನ್ನು 15 ದಿನಗಳಿಗೆ ಖಾಲಿ ಮಾಡಿಬಿಡುತ್ತಿದ್ದ ಎಂಬ ಕುತೂಹಲಕಾರಿ ಅಂಶಗಳು ಪತ್ತೆಯಾಗಿವೆ.

ಡ್ರಗ್ಸ್ ಜಾಲದಲ್ಲಿ ಬಂಧಿತನಾಗಿರುವ ಸಾಫ್ಟ್‍ವೇರ್ ಎಂಜಿನಿಯರ್ ಆದಿತ್ಯ ಅಗರ್ವಾಲ್ ಮತ್ತೊಬ್ಬ ಕಿಂಗ್‍ಪಿನ್ ವೀರೇನ್ ಖನ್ನಾನ ಬಲಗೈ ಭಂಟ ಎನ್ನಲಾಗಿದೆ.

ಈ ಇಬ್ಬರು ಜೀವನ ಚಿಕ್ಕದು. ಇರುವಷ್ಟು ದಿನ ಮಜಾ ಮಾಡಿ ಸಾಯಬೇಕು ಎಂಬ ಸಿದ್ಧಾಂತಕ್ಕೆ ಅಂಟಿಕೊಂಡಿದ್ದರು. ಹಾಗಾಗಿ ಇಬ್ಬರೂ ಮೋಜಿನ ಜೀವನದ ದಾಸರಾಗಿದ್ದರು. ನೀನೂ ಮದುವೆಯಾಗಬೇಡ,  ನಾನೂ ಮದುವೆಯಾಗುವುದಿಲ್ಲ ಎಂಬ ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ನಗರದ ಪ್ರತಿಷ್ಠಿತ ಕಂಪೆನಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಆದಿತ್ಯ ಅಗರ್ವಾಲ್‍ಗೆ ತಿಂಗಳಿಗೆ 4 ಲಕ್ಷ ರೂ. ಸಂಬಳ ಬರುತ್ತಿತ್ತು. ಆದರೆ, ಅದನ್ನು 15 ದಿನಗಳಿಗೇ ಖಾಲಿ ಮಾಡುತ್ತಿದ್ದರು.

ವೀರೇನ್ ಖನ್ಹಾ ಮತ್ತು ಆದಿತ್ಯ ಅಗರ್ವಾಲ್ ಹೈ-ಫೈ ಪಾರ್ಟಿಗಳನ್ನು ಆಯೋಜನೆ ಮಾಡುತ್ತಿದ್ದರು.ಸ್ಟಾರ್ ಹೊಟೇಲ್‍ಗಳಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು. ಕೆಲವೊಮ್ಮೆ ದಿನವೊಂದಕ್ಕೇ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದರು.

ಐಷಾರಾಮಿ ಜೀವನದಲ್ಲಿ ಮುಳುಗಿಹೋಗಿದ್ದ ಆರೋಪಿಗಳಿಗೆ ತಾವು ಡ್ರಗ್ಸ್ ಜಾಲದಲ್ಲಿ ಸಿಲುಕಿ ಜೀವನ ಕಳೆದುಕೊಳ್ಳುತ್ತಿರುವ ಪಶ್ಚಾತ್ತಾಪವೇ ಇರಲಿಲ್ಲ ಎನ್ನಲಾಗಿದೆ. ಆದಿತ್ಯ ಅಗರ್ವಾಲ್‍ನನ್ನು ಹರಿಯಾಣದಲ್ಲಿ ಬಂಧಿಸಿದರೆ, ವೀರೇನ್ ಖನ್ಹಾನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಈ ಇಬ್ಬರೂ ಆರೋಪಿಗಳಿಗೆ ಅಂತಾರಾಜ್ಯ ಸಂಪರ್ಕವಿರುವುದು ತನಿಖೆಯಲ್ಲಿ ಬೆಳಕಿಗೆ ಬರುತ್ತಿದೆ ಎಂದು ಹೇಳಲಾಗಿದೆ.

Facebook Comments