ಲೈಂಗಿಕ ಅಪರಾಧಗಳಿಗೆ 1075 ವರ್ಷ ಜೈಲು..!

ಈ ಸುದ್ದಿಯನ್ನು ಶೇರ್ ಮಾಡಿ

ಟರ್ಕಿ, ಜ.12- ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಧರ್ಮಗುರು ಅದ್ನಾನ್ ವಕ್ತಾರ್‍ಗೆ ಇಸ್ತಾಂಬುಲ್ ನ್ಯಾಯಾಲಯ 1075 ವರ್ಷಗಳ ಶಿಕ್ಷೆ ವಿಧಿಸಿದೆ.  64 ವರ್ಷದ ಅದ್ನಾನ್ ವಕ್ತಾರ್‍ನನ್ನು ಅಪರಾಧಿ ಎಂದು ಘೋಷಣೆ ಮಾಡಿದ ನ್ಯಾಯಾಲಯ ಹಲವಾರು ಅಪರಾಧಗಳಿಗಾಗಿ ಶಿಕ್ಷೆಯನ್ನು ಘೋಷಣೆ ಮಾಡಿದೆ. ಅದ್ನಾನ್ ಕಳೆದ ಡಿಸೆಂಬರ್‍ನಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗಿ ತನಗೆ ಸಾವಿರಕ್ಕೂ ಹೆಚ್ಚು ಗೆಳತಿಯರಿರುವುದನ್ನು ಒಪ್ಪಿಕೊಂಡಿದ್ದ.

ಪ್ರೀತಿ ಮನುಷ್ಯ ಸಹಜ ಗುಣ. ನನ್ನ ಹೃದಯದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆ. ನಾನು ಅತ್ಯದ್ಭುತವಾದ ವ್ಯಕ್ತಿ ಎಂದು ಘೋಷಣೆ ಮಾಡಿಕೊಂಡಿದ್ದ. 1990ರಲ್ಲಿ ಬಹಿರಂಗವಾಗಿ ಕಾಣಿಸಿ ಕೊಂಡ ಅದ್ನಾನ್, ಹಲವಾರು ಲೈಂಗಿಕ ಹಗರಣಗಳಲ್ಲಿ ಸಿಲುಕಿದ್ದಾನೆ. ಈತನ ವಿರುದ್ಧ ನಡೆದ ವಿಚಾರಣೆಗಳ ವೇಳೆ 236 ಸಾಕ್ಷಿಗಳು ಸಾಬೀತಾಗಿವೆ.

Facebook Comments