ಪ್ರಾಣಿಪ್ರಿಯರಿಗೆ ದರ್ಶನ ನೀಡಿದ ಆರ್ಡ್ ವಾರ್ಕ್ ಸಸ್ತನಿ ಮರಿ

ಈ ಸುದ್ದಿಯನ್ನು ಶೇರ್ ಮಾಡಿ

DS

ಈ ಜೀವಜಗತ್ತೇ ವಿಸ್ಮಯ. ಸಸ್ತನಿಗಳ ಲೋಕದಲ್ಲಿ ಅಪರೂಪದ ಪ್ರಾಣಿಗಳಿವೆ. ಅವುಗಳಲ್ಲಿ ಆರ್ಡ್ ವಾರ್ಕ್ ಕೂಡ ಒಂದು. ಫ್ರಾಂಕ್‍ಫರ್ಟ್ ನಗರದ ಮೃಗಾಲಯದಲ್ಲಿ ಜನಿಸಿದ ಹೆಣ್ಣು ಮರಿ ಈಗ ಸಾರ್ವಜನಿಕರಿಗೆ ದರ್ಶನ ನೀಡುತ್ತಿದೆ. ಹೊಸ ಅತಿಥಿಯ ಆಗಮನದಿಂದ ಪ್ರಾಣಿಪ್ರಿಯರು ಪುಳಕಗೊಂಡಿದ್ದಾರೆ.
ಜರ್ಮನಿಯ ಫ್ರಾಂಕ್‍ಫರ್ಟ್ ನಗರದ ಮೃಗಾಲಯಕ್ಕೆ ಆಗಮಿಸಿರುವ ಹೊಸ ಅತಿಥಿ ನೋಡಲು ಪ್ರೇಕ್ಷಕರು ತಂಡೋ ಪತಂಡವಾಗಿ ಬರುತ್ತಿದ್ದಾರೆ. ಒಂದೂವರೆ ತಿಂಗಳಿನ ಆರ್ಡ್ ವಾರ್ಕ್ ಸಸ್ತನಿ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ದರ್ಶನ ನೀಡುತ್ತಿದೆ.  ಈ ಮುದ್ದು ಹೆಣ್ಣು ಮರಿ ಈಗ ಏಳು ಕಿಲೋಗ್ರಾಂ ತೂಕವಿದೆ. ಇದು 65 ಕೆಜಿವರೆಗೂ ಬೆಳೆಯ ಬಲ್ಲದು. ಈ ಮರಿ ಜನಿಸಿದ ನಂತರ ಇದರ ತಂದೆ ಎಲ್ವಿಸ್ ಮೃತಪಟ್ಟಿತು. ಇದಕ್ಕೆ ತಂದೆಯ ಹೆಸರು ಸೇರಿಸಿ ಎಲ್ವಿಸ್ ಮೆಂಫಿಸ್ ಎಂಬ ಹೆಸರಿಡಲಾಗಿದೆ. ಇದರ ತಾಯಿ ಎರ್‍ಮೈನ್. ಇದು ತಾಯಿಯನ್ನು ಬಿಟ್ಟಿರಲಾರದು. ಸದಾ ಅದರ ಹಿಂದೆಯೇ ಹಿಂಬಾಲಿಸುತ್ತದೆ.  ಈ ಮರಿ ಈಗ ತಾಯಿ ಹಾಲು ಸೇವಿಸುತ್ತಿದೆ. ಜೊತೆಗೆ ಮಾಂಸ, ಕ್ಯಾರೆಟ್ ಇತರ ತರಕಾರಿಗಳಿಂದ ತಯಾರಿಸಿದ ಪೇಸ್ಟ್‍ನನ್ನು ಆಹಾರವಾಗಿ ನೀಡಲಾಗುತ್ತಿದೆ ಎಂದು ಮೃಗಾಲಯದ ಕ್ಯೂರೇಟರ್ ಜೋಹನ್ನಾಸ್ ಕೊಯಿಲರ್ ತಿಳಿಸಿದ್ದಾರೆ. ಸಸ್ತನಿಲೋಕದ ವಿಶಿಷ್ಟ ಜೀವಿಗಳಾದ ಇವು ರಾತ್ರಿ ವೇಳೆ ಬೇಟೆಗೆ ಹೊರಡುತ್ತವೆ.
ಇರುವೆ, ಗೆದ್ದಲು ಹಾಗೂ ಸಣ್ಣ ಹುಳ-ಹುಪ್ಪಟೆಗಳು ಇವುಗಳ ಆಹಾರ. ಬಿಲದಿಂದ ಹಲವಾರು ಕಿಲೋಮೀಟರ್‍ಗಳಷ್ಟು ದೂರ ಆಹಾರ ಅರಸುತ್ತಾ ಹೋಗಿ ಹಿಂದಿರುಗುತ್ತವೆ.

Facebook Comments

Sri Raghav

Admin