ಈ ಜೋಡಿಯದ್ದು 80 ವರ್ಷಗಳ ದಾಂಪತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

DS

ಜಪಾನಿನ ಸತಿ-ಪತಿ ಸುದೀರ್ಘ ದಾಂಪತ್ಯ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ದಂಪತಿ 80 ವರ್ಷಗಳ ಕಾಲ ಜೊತೆಯಾಗಿ ಬಾಳಿ ಬದುಕುತ್ತಿದ್ದಾರೆ. ಈ ಆದರ್ಶ ಗಂಡ-ಹೆಂಡತಿ ಶತಾಯುಷಿಗಳೆಂಬುದು ಮತ್ತೊಂದು ವಿಶೇಷ. ಸಹನೆ-ಸಂಯಮ ಮತ್ತು ಹೊಂದಾಣಿಕೆಯೇ ನಮ್ಮ ದೀರ್ಘಾವಧಿ ದಾಂಪತ್ಯ ಗೀತೆಯ ಗುಟ್ಟು ಎನ್ನುತ್ತಾರೆ ಈ ವಯೋವೃದ್ಧ ದಂಪತಿ. ಇವರನ್ನು ನಾವೀಗ ಭೇಟಿ ಮಾಡೋಣ..

ಉದಯರವಿ ನಾಡು ಜಪಾನ್‍ನ ಟಕಮಸ್ಟು ಪಟ್ಟಣದಲ್ಲಿ ವಾಸಿಸುತ್ತಿರುವ 108 ವರ್ಷದ ಮಸಾವೋ ಹಾಗೂ ಅವರ ಪತ್ನಿ 100 ವರ್ಷಗಳ ಮಿಯಾಕೋ ಮಸ್ಟು ಮೊಟೊ ವಿಶ್ವದ ಅತ್ಯಂತ ದೀರ್ಘ ಕಾಲ ದಾಂಪತ್ಯ ಜೀವನ ನಡೆಸುತ್ತಿರುವ ಶತಾಯುಷಿ ದಂಪತಿ ಎಂಬ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.  ಇವರಿಬ್ಬರ ಒಟ್ಟು ವಯೋಮಾನ 208 ವರ್ಷಗಳು. ಕಳೆದ ಎಂಟು ದಶಕಗಳಿಂದಲೂ ದಾಂಪತ್ಯ ಜೀವನ ನಡೆಸುತ್ತಿರುವ ಈ ಶತಾಯಿಷಿ ದಂಪತಿಯ ದಾಂಪತ್ಯ ಗೀತೆ ಮತ್ತು ಉತ್ತಮ ಆರೋಗ್ಯ ಬೆರಗು ಮೂಡಿಸುವಂಥದ್ದು. ಟಕಮಸ್ಟು ಪಟ್ಟಣದ ತಮ್ಮ ಹಳೆಯ ಮನೆಯಲ್ಲಿ ಇವರಿಬ್ಬರು ಸಂತೋಷದಿಂದ ಬಾಳುತ್ತಿದ್ದಾರೆ.

ಸಹನೆ-ಸಂಯಮ ಮತ್ತು ಹೊಂದಾಣಿಕೆಯೇ ನಮ್ಮ ದೀರ್ಘಾವಧಿ ದಾಂಪತ್ಯ ಗೀತೆಯ ಗುಟ್ಟು ಎನ್ನುತ್ತಾರೆ 80 ವರ್ಷಗಳ ಹಿಂದೆ ಮಸಾವೋ ಅವರನ್ನು ಮದುವೆಯಾದ ಮಿಯಾಕೋ. ಇತ್ತೀಚೆಗೆ ಈ ಸುದೀರ್ಘ ಕಾಲದ ಸತಿ-ಪತಿಯನ್ನು ಅವರ ಮನೆಯಲ್ಲಿ ಸರ್ಕಾರದ ಉನ್ನತಾಧಿಕಾರಿಗಳು, ಕುಟುಂಬದ ಸದಸ್ಯರು ಹಾಗೂ ಬಂಧು-ಮಿತ್ರರು ಅಭಿನಂದಿಸಿ ಇನ್ನೂ ದೀರ್ಘಾವಧಿ ದಾಂಪತ್ಯ ಗೀತೆ ಮುಂದುವರಿಸುವಂತೆ ಹಾರೈಸಿದರು.  ಇವರಿಬ್ಬರು ಮದುವೆಯಾಗಿದ್ದು 1937ರಲ್ಲಿ. ತುಂಬಾ ಬಡವರಾಗಿದ್ದ ಇವರು ಮದುವೆ ಸಮಾರಂಭವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡರು. ಎರಡನೇ ವಿಶ್ವ ಯುದ್ದದ ವೇಳೆ ಮಾಸವೋ ಅವರನ್ನು ಅನೇಕ ಬಾರಿ ವಿದೇಶಗಳ ರಣರಂಗಕ್ಕೆ ರವಾನಿಸಲಾಗಿತ್ತು. ಅಚ್ಚರಿಯ ಎಂಬಂತೆ ಅನೇಕ ಸಂದರ್ಭಗಳಲ್ಲಿ ಸಾವಿನಿಂದ ಬಚಾವ್ ಆಗಿದ್ದರು. ನಂತರ ಅವರು ಬಂದರು ಪ್ರಾಧಿಕಾರದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಇಂದು ಈ ಶತಾಯುಷಿ ದಂಪತಿ 60 ಜನರ ದೊಡ್ಡ ಕುಟುಂಬ ಹೊಂದಿದ್ದಾರೆ. ಇತ್ತೀಚೆಗೆ ಇವರ 25ನೇ ಮರಿ ಮೊಮ್ಮಗನ ಜನ್ಮದಿನದಲ್ಲಿ ಇವರು ಭಾಗವಹಿಸಿದ್ದರು.  ನಮ್ಮ ತಂದೆ ತುಂಬಾ ಕಟ್ಟುನಿಟ್ಟಿನ ವ್ಯಕ್ತಿ ಹಾಗೂ ಶ್ರಮಜೀವಿ. ನಮ್ಮ ತಾಯಿ ಮನೆಗೆಲಸಗಳನ್ನು ನಿಭಾಯಿಸುತ್ತಾ ಮಕ್ಕಳನ್ನು ಆರೈಕೆ ಮಾಡುತ್ತಿದ್ದರು. ಇಂಥ ತಂದೆತಾಯಿ ಪಡೆದ ನಾವೇ ಭಾಗ್ಯವಂತರು ಎಂದು ಕಿರಿಯ ಪುತ್ರಿ ಹಿರೋಮಿ ಸ್ಯಾಟೋ ಹೇಳುತ್ತಾರೆ.

Facebook Comments

Sri Raghav

Admin