ಆಫ್ಘಾನಿಸ್ತಾನದಲ್ಲಿ ಪ್ರವಾಹಕ್ಕೆ 190 ಜನ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಸೆ.1- ಆಫ್ಘಾನಿಸ್ತಾನದ ಉತ್ತರ ಹಾಗೂ ಪೂರ್ವ ಭಾಗದಲ್ಲಿ ವರ್ಷಧಾರೆಯಿಂದ ಉಂಟಾಗಿರುವ ಪ್ರವಾಹದಲ್ಲಿ ಸುಮಾರು 190 ಜನ ಮೃತಪಟ್ಟಿದ್ದಾರೆ. ಬಹುತೇಕ ಗುಡ್ಡ ಗಾಡು ಪ್ರದೇಶಗಳಿಂದ ಕೂಡಿರುವ ಆಫ್ಘಾನಿಸ್ತಾನದಲ್ಲಿ ಕಳೆದೊಂದ ವಾರದಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಜಲಾವೃತ ಪ್ರದೇಶಗಳು ನೀರಿನಿಂದ ಜಲಾವೃತವಾಗಿದೆ.

ಕೆಲವು ಸಂಪರ್ಕ ರಸ್ತೆಗಳು ಕೊಚ್ಚಿ ಹೋಗಿದ್ದು , ಹಲವು ಕಡೆ ಭೂ ಕುಸಿತಗಳಿಂದ ಜೀವ ಹಾನಿ ಹೆಚ್ಚಾಗಿದೆ. ಯುದ್ಧದಿಂದಲೇ ನಲುಗಿರುವ ಆಫ್ಘಾನಿಸ್ತಾನದಲ್ಲಿ ಮೂಲಭೂತ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿಯೇ ಇದೆ. ಈ ನಡುವೆ ಈ ಜಲ ಪ್ರಳಯ ದೇಶವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ವಿಪತ್ತು ನಿರ್ವಹಣಾ ಇಲಾಖೆಯ ರಾಜ್ಯ ಸಚಿವ ಗುಲಾಂ ಲಾವಾ ವುಲ್ದೀನ್ ಗಿಲಾನಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಾವನ್ನಪ್ಪಿದವರ ಸಂಖ್ಯೆ 190ಕ್ಕೆ ಮುಟ್ಟಿದೆ. ಇನ್ನು ಹಲವರು ಕಣ್ಮರೆಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್‍ಗಳನ್ನು ಬಳಸಿ ರಕ್ಷಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Facebook Comments