ರಾಷ್ಟ್ರಧ್ವಜದ ಮುಂದೆ ಕಣ್ಣೀರಿಟ್ಟ ಆಫ್ಘಾನಿಸ್ತಾನದ ಕ್ರಿಕೆಟ್ ನಾಯಕ , ವಿಡಿಯೋ ವೈರಲ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.26- ದುಬೈನಲ್ಲಿ ಟಿ-20 ಪಂದ್ಯಾವಳಿಗೂ ತಮ್ಮ ದೇಶದ ರಾಷ್ಟ್ರಗೀತೆ ಗಾಯನದ ವೇಳೆ ರಾಷ್ಟ್ರಧ್ವಜದ ಮುಂದೆ ಆಫ್ಘಾನಿಸ್ತಾನದ ಕ್ರಿಕೆಟ್ ನಾಯಕ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗುತ್ತಿದೆ. ಆಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಗಸ್ಟ್ 15ರಂದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಮೊದಲಿದ್ದ ಸರ್ಕಾರವನ್ನು ಕಿತ್ತೊಗೆದು ತಮ್ಮ ಸರ್ಕಾರ ರಚಿಸಿದ್ದಾರೆ. ಆಫ್ಘಾನಿಸ್ತಾನದ ರಾಷ್ಟ್ರಧ್ವಜ ಬಳಕೆಯನ್ನು ನಿರ್ಬಂಧಿಸಲಾಗಿದೆ. ಬದಲಾಗಿ ತಾಲಿಬಾನಿಗಳು ತಮ್ಮ ಧ್ವಜ ಬಳಕೆ ಮಾಡುತ್ತಿದ್ದಾರೆ.ಅಂತರರಾಷ್ಟ್ರೀಯ ಸಮುದಾಯದಲ್ಲಿ ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನದ ಧ್ವಜವನ್ನು ಬಳಕೆ ಮಾಡಲಾಗಿದೆ.

ದುಬೈನಲ್ಲಿ ನಿನ್ನೆ ನಡೆದ ಟಿ-20 ಪಂದ್ಯಾವಳಿಗೂ ಮುನ್ನಾ ಆಫ್ಘಾನಿಸ್ತಾನ ಮತ್ತು ಪ್ರತಿತಂಡದ ಸ್ಕಾಟ್‍ಲ್ಯಾಂಡ್ ದೇಶಗಳ ರಾಷ್ಟ್ರಗೀತೆ ಹಾಕಲಾಯಿತು. ಮೈದಾನದಲ್ಲಿ ಎರಡು ದೇಶಗಳ ರಾಷ್ಟ್ರಧ್ವಜ ಹಿಡಿದಿಡಲಾಗಿತ್ತು. ಆಫ್ಘಾನಿಸ್ತಾನದ ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ತಂಡದ ನಾಯಕ ಮೊಹಮ್ಮದ್ ನಬಿ ಭಾವೋದ್ವೇಗಕ್ಕೆ ಒಳಗಾಗಿ, ಕಣ್ಣೀರು ಹಾಕಿದ್ದಾರೆ.

ನಬಿ ಕಣ್ಣೀರು ಒರೆಸಿಕೊಳ್ಳುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಇದು ಆಫ್ಘಾನಿಸ್ತಾನದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ತಾಲಿಬಾನಿಗಳು ಭೌತಿಕವಾಗಿ ಆಫ್ಘಾನಿಸ್ತಾನವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು, ಆದರೆ ದೇಶದ ಜನರ ಅಸ್ಮೀತೆಯನ್ನಲ್ಲ. ಜನರ ಆತ್ಮ ಆಫ್ಘಾನಿಸ್ತಾನಕ್ಕಾಗಿ ಮಿಡಿಯುತ್ತಿದೆ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.

ಟಿ-20 ಪಂದ್ಯದಲ್ಲಿ ಆಫ್ಘಾನಿಸ್ತಾನದ ಧ್ವಜದ ಬದಲು ತಮ್ಮ ಧ್ವಜ ಬಳಸಬೇಕು ಎಂದು ತಾಲಿಬಾನಿಗಳು ಕ್ರಿಕೆಟ್ ಮಂಡಳಿಯ ಮೇಲೆ ಭಾರೀ ಒತ್ತಡ ಹೇರಿದರು. ಆದರೆ ಅದಕ್ಕೆ ಅಂತರರಾಷ್ಟ್ರೀಯ ಸಮುದಾಯ ಸೊಪ್ಪು ಹಾಕಲಿಲ್ಲ. ಅಂತಿಮವಾಗಿ ದೇಶದ ಹೊರಗೆ ತಮ್ಮ ರಾಷ್ಟ್ರಧ್ವಜ ಕಂಡು ಕ್ರಿಕೆಟಿಗರು ಕಣ್ಣೀರು ಹಾಕಿರುವುದು ಭಾವನಾತ್ಮಕವಾಗಿ ಮನಮಿಡಿಯುವಂತಿದೆ. ಪಂದ್ಯದಲ್ಲಿ ಆಫ್ಘಾನಿಸ್ತಾನ ಸೋಲು ಕಂಡಿದೆ. ಆದರೆ ಈ ವಿಡಿಯೋ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Facebook Comments