ಜೈಲಿನ ಮೇಲೆ ಐಸಿಸ್ ಉಗ್ರದ ದಾಳಿ, 21 ಸಾವು, ಕೈದಿಗಳು ಪರಾರಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಆ.3-ಹಿಂಸಾಚಾರಪೀಡಿತ ಆಫ್ಘಾನಿಸ್ತಾನದ ಪೂರ್ವ ನಂಗರ್‍ಹಾರ್‍ನ ಜೈಲೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 21 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.
ಈ ಘಟನೆಯಲ್ಲಿ ಅನೇಕ ಕೈದಿಗಳು ಪರಾರಿಯಾಗಿದ್ದಾರೆ.

ನಂಗರ್‍ಹಾರ್ ಪ್ರಾಂತ್ಯದ ರಾಜಧಾನಿ ಜಲಾಲಬಾದ್‍ನ ಕಾರಾಗೃಹದ ಪ್ರವೇಶದ್ವಾರದಲ್ಲಿ ಮಾನವ ಬಾಂಬ್ ದಾಳಿ ನಡೆಯಿತು. ನಂತರ ಒಳನುಗ್ಗಿದ ಐಸಿಸ್ ಉಗ್ರರು ಗುಂಡಿನ ಸುರಿಮಳೆಗರೆದರು.

ಈ ಆಕ್ರಮಣದಲ್ಲಿ ಆಫ್ಘನ್ ಭದ್ರತಾಪಡೆಯ ಸಿಬ್ಬಂದಿ ಮತ್ತು ಕೆಲ ಕೈದಿಗಳು ಹತರಾದರು. ಇದೇ ವೇಳೆ ಅನೇಕ ಸೆರೆಯಾಳುಗಳು ಜೈಲಿನಿಂದ ಪರಾರಿಯಾಗಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಆಘ್ಭಾನಿಸ್ತಾನದ ಹಲವು ನಗರಗಳಲ್ಲಿ ಭದ್ರತಾಪಡೆ ಮತ್ತು ತಮ್ಮ ವಿರೋಧಿಗಳನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಹಿಂಸಾತ್ಮಕ ದಾಳಿಗಳಲ್ಲಿ ಅನೇಕರು ಸಾವಿಗೀಡಾಗಿದ್ದಾರೆ.

Facebook Comments

Sri Raghav

Admin