ಹ್ಯಾಟ್ರಿಕ್ ಗೆಲುವು ಸಾಧಿಸಿದ ನ್ಯೂಜಿಲೆಂಡ್

ಈ ಸುದ್ದಿಯನ್ನು ಶೇರ್ ಮಾಡಿ

ಟೌನ್‍ಟನ್ , ಜೂ.9- ನ್ಯೂಜಿಲೆಂಡ್‍ನ ನಾಯಕ ಕೇನ್ ವಿಲಿಯಮ್ಸ್‍ರ ಆಕರ್ಷಕ ಅರ್ಧಶತಕ (79 ರನ್, 9 ಬೌಂಡರಿ), ಫಾಗ್ರ್ಯೂಸನ್ (4 ವಿಕೆಟ್) ಹಾಗೂ ನಿಶೀಮ್ (5ವಿಕೆಟ್)ರ ಕರಾರುವಾಕ್ಕದ ಬೌಲಿಂಗ್‍ನಿಂದ ದುರ್ಬಲ ಆಫ್ಘಾನಿಸ್ತಾನ ಎದುರು ಕಿವೀಸ್ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ವಿಶ್ವಕಪ್ ಗೆಲ್ಲುವ ಹಾಟ್‍ಫೇವರೇಟ್ ತಂಡವಾಗಿರುವ ನ್ಯೂಜಿಲೆಂಡ್ ಈಗಾಗಲೇ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದ್ದ ಕಿವೀಸ್ ಆಫ್ಘಾನ್ ವಿರುದ್ಧ ಹಾಟ್ರಿಕ್ ಗೆಲುವು ಸಾಧಿಸಿದೆ.

ಕಿವೀಸ್‍ಗೆ ಆಘಾತ: ಆಫ್ಘಾನ್ ನೀಡಿದ 173 ರನ್‍ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಕೇನ್ ಪಡೆ ಖಾತೆ ತೆರೆಯುವ ಮುನ್ನವೇ ಮಾರ್ಟಿನ್‍ಗುಪ್ಟಿಲ್ (0ರನ್) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ನಾಯಕ ಕೇನ್ ವಿಲಿಯಮ್ಸ್‍ರೊಂದಿಗೆ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತ ಆರಂಭಿಕ ಆಟಗಾರ ಕಾಲಿನ್ ಮುನ್ರೊ (22ರನ್, 4 ಬೌಂಡರಿ) ರ ವಿಕೆಟ್ ಅನ್ನು ಅಫ್ತಾಬ್ ಆಲಾಮ್ ಕೆಡವಿದಾಗ ಕಿವೀಸ್ 2 ವಿಕೆಟ್ ಕಳೆದುಕೊಂಡು 40 ರನ್ ಗಳಿಸಿತ್ತು.

ಕೇನ್- ಟೇಲರ್ ಆಸರೆ: ಬಾಂಗ್ಲಾ ವಿರುದ್ಧ ಆಕರ್ಷಕ ಅರ್ಧಶತಕ ಗಳಿಸಿ ಕಿವೀಸ್ ಗೆಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಟೇಲರ್, ಆಫ್ಘಾನ್ ವಿರುದ್ಧವೂ ನಾಯಕ ವಿಲಿಯಮ್ಸ್‍ರೊಂದಿಗೆ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಆರಂಭದಿಂದಲೂ ವೇಗವಾಗಿ ರನ್ ಗಳಿಸಿದ ಟೇಲರ್ 52 ಎಸೆತಗಳನ್ನು ಎದುರಿಸಿ 7 ಬೌಂಡರಿ 1 ಸಿಕ್ಸರ್ ಸಿಡಿ ಅರ್ಧಶತಕ (48 ರನ್)ದ ಅಂಚಿನಲ್ಲಿದ್ದಾಗ ಅಫ್ತಾಬ್ ಅಲಂ ಬೌಲಿಂಗ್‍ನಲ್ಲಿ ಕ್ಲೀನ್ ಬೌಲ್ಡ್ ಆದರು. 3 ನೆ ವಿಕೆಟ್‍ಗೆ ಈ ಜೋಡಿಯು 89 ರನ್‍ಗಳನ್ನು ಕಲೆ ಹಾಕುವ ಮೂಲಕ ತಂಡವನ್ನು ಗೆಲುವಿನ ಅಂಚಿಗೆ ತಲುಪಿಸಿದರು.

ಅಂತಿಮ ಕ್ಷಣದವರೆಗೂ ಆಫ್ಘಾನ್ ಬೌಲರ್‍ಗಳನ್ನು ಕಾಡಿದ ಕಿವೀಸ್ ನಾಯಕ ಕೇನ್ 9 ಬೌಂಡರಿಗಳ ನೆರವಿನಿಂದ 79 ರನ್ ಗಳಿಸುವ ಮೂಲಕ 32.1 ಓವರ್‍ಗಳಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನ್ ಹಸಮತುಲ್ಲಾ ಶಾಹೀದಿ (59 ರನ್, 9 ಬೌಂಡರಿ), ಅಜ್ರಾತುಲ್ಲಾ ಜಜಾಯ್ (34 ರನ್, 5 ಬೌಂಡರಿ, 1 ಸಿಕ್ಸರ್), ನೂರ್ ಅಲಿ ಜರ್ದಾನ್ (31 ರನ್, 5 ಬೌಂಡರಿ)ರ ಆಕರ್ಷಕ ಬ್ಯಾಟಿಂಗ್‍ನಿಂದಾಗಿ 172 ರನ್‍ಗಳನ್ನು ಗಳಿಸಿತ್ತು.

# ಬೌಲಿಂಗ್ ಮಾಡದ ರಶೀದ್:
ಆಫ್ಘಾನ್‍ನ ಅಲೌಂಡರ್ ರಶೀದ್‍ಖಾನ್ ಬ್ಯಾಟಿಂಗ್ ಮಾಡುವ ನ್ಯೂಜಿಲೆಂಡ್‍ನ ವೇಗಿ ಫಾಗ್ರ್ಯೂಸನ್‍ರ ಬೌಲಿಂಗ್‍ನಲ್ಲಿ ತಲೆಗೆ ಬಲವಾಗಿ ಪೆಟ್ಟಾದ ಪರಿಣಾಮ ರಶೀದ್ ಬೌಲಿಂಗ್ ಮಾಡಲು ಇಳಿಯದಿದ್ದದ್ದು ಆಫ್ಘಾನ್‍ನ ಬೌಲಿಂಗ್ ದುರ್ಬಲವಾಗಿ ಕಿವೀಸ್ ಬ್ಯಾಟ್ಸ್‍ಮನ್‍ಗಳಿಗೆ ವರದಾನವಾಗಿ ಪರಿಣಮಿಸಿತು.

# ಸ್ಕೋರ್ ವಿವರ:
ಆಫ್ಘಾನಿಸ್ಥಾನ್ 41.1 ಓವರ್‍ಗಳಲ್ಲಿ 172 ರನ್
ಹಸಮತುಲ್ಲಾ ಶಾಹೀದಿ (59 ರನ್, 9 ಬೌಂಡರಿ)
ಅಜ್ರಾತುಲ್ಲಾ ಜಜಾಯ್ (34 ರನ್, 5 ಬೌಂಡರಿ, 1 ಸಿಕ್ಸರ್)
ನೂರ್ ಅಲಿ ಜರ್ದಾನ್ (31 ರನ್, 5 ಬೌಂಡರಿ)
ನ್ಯೂಜಿಲೆಂಡ್ ಬೌಲಿಂಗ್:
ಫಾಗ್ರ್ಯೂಸನ್:9.1-3-37-4(ವಿಕೆಟ್)
ಜಿಮ್ಮಿ ನೀಶಾಮ್:10-1-31-5(ವಿಕೆಟ್)
ಕಾಲಿನ್ ಗ್ರಾಂಡ್‍ಹೋಮೆ:4-1-14-1(ವಿಕೆಟ್)
ನ್ಯೂಜಿಲೆಂಡ್: 172/3 (32.1 ಓವರ್)
ಕಾಲಿನ್‍ಮುನ್ರೊ (22 ರನ್, 4 ಬೌಂಡರಿ)
ರಾಸ್ ಟೇಲರ್(48 ರನ್,6 ಬೌಂಡರಿ, 1 ಸಿಕ್ಸರ್)
ಕೇನ್ ವಿಲಿಯಮ್ಸ್ (79*ರನ್, 9 ಬೌಂಡರಿ)
ಆಫ್ಘಾನ್ ಬೌಲಿಂಗ್:
ಅಫ್ತಾಬ್ ಅಲಂ: 8.1-0-45-3(ವಿಕೆಟ್)
ಹಮೀದ್ ಅಸನ್:7-0-30-0
ರಹಾಮತ್ ಶಾ:5-0-21-0

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin