ಆಫ್ರಿಕಾದಿಂದ ಬಂದವರಿಂದ ಬಳ್ಳಾರಿಯಲ್ಲಿ ಹೆಚ್ಚಿದ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ, ನ.30- ಆಫ್ರಿಕಾದಲ್ಲಿ ಪತ್ತೆಯಾಗಿರುವ ಒಮೈಕ್ರಾನ್ ಸೋಂಕು ಎಲ್ಲಾಡೆ ಆತಂಕ ಮೂಡಿಸುತ್ತಿರುವ ನಡುವೆಯೆ ಆಫ್ರಿಕಾದಿಂದ ನಗರಕ್ಕೆ ಬಂದಿರುವ ಇಬ್ಬರನ್ನು ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗಿದೆ. ನೆರೆಯ ವಿಜಯನಗರ ಜಿಲ್ಲಾಯ ಹೊಸಪೇಟೆ ನಗರಕ್ಕೆ ಆಫ್ರಿಕಾದಿಂದ ಬಂದಿರುವ ಇವರಿಬ್ಬರ ಕುಟುಂಬದವರ ರಕ್ತದ ಮಾದರಿಯನ್ನು ಪರೀಕ್ಷಿಸಿ ಕ್ವಾರಂಟೈನ್ ಮಾಡಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಎಲï. ಜನಾರ್ಧನ್ ಹೇಳಿದರು.

ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ಆಫ್ರಿಕಾ ದೇಶಕ್ಕೆ ಕೆಲಸದ ನಿಮಿತ್ತ ಹೋಗಿದ್ದ ಈ ಇಬ್ಬರು ವ್ಯಕ್ತಿಗಳು ವಿಮಾನದಲ್ಲಿ ಮುಂಬೈಗೆ ಆಗಮಿಸಿ ಅಲ್ಲಿಂದ ಖಾಸಗಿ ವಾಹನದಲ್ಲಿ ಹೊಸಪೇಟೆಗೆ ಬಂದಿದ್ದು, ಮಾಹಿತಿ ಪಡೆದು ಕೂಡಲೇ ಅವರಿಗೆ ತಪಾಸಣೆ ಮಾಡಲಾಗಿದೆ. ಆರ್ ಟಿಪಿಸಿಆರ್ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದ್ದು, ನೆಗೆಟಿವ್ ವರದಿ ಬಂದಿದೆ.

ಆದರೂ, ಇಬ್ಬರನ್ನು ಕ್ವಾರೈಂಟೈನ್ ಮಾಡಲಾಗಿದೆ. ಏಳು ದಿನಗಳ ನಂತರ ಮತ್ತೊಮ್ಮೆ ಪರೀಕ್ಷಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯ ಸರ್ಕಾದಂದ ಯಾವುದೇ ಮಾರ್ಗಸೂಚಿಗಳು ಬಂದಿಲ್ಲ. ಮೇಲಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಡಾ. ಇಂದ್ರಾಣಿ, ಮಕ್ಕಳ ರಕ್ಷಣಾಕಾರಿ ರಾಜಾನಾಯ್ಕರ್‍ಇದ್ದರು.

Facebook Comments