ಅ.27ರಿಂದ ಆಫ್ರಿಕಾದಿಂದ ಬೆಂಗಳೂರಿಗೆ ವಿಮಾನ ಸೇವೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಇಥಿಯೋಪಿಯಾ ಏರ್‍ಲೈನ್ಸ್ ಮತ್ತು ಸ್ಕೈಟ್ರಾಕ್ಸ್ ವಾಯುಯಾನ ಸಂಸ್ಥೆ ವತಿಯಿಂದ ಇದೇ ಮೊದಲ ಬಾರಿಗೆ ಅ.27 ರಂದು ಆಫ್ರಿಕಾದಿಂದ ಬೆಂಗಳೂರಿಗೆ ನೇರ ವಿಮಾನ ಸೇವೆ ಆರಂಭಿಸಿದೆ. ಸುದ್ದಿಗೋಷ್ಠಿಯಲ್ಲಿ ಏರ್‍ಲೈನ್ಸ್‍ನ ಉಪಖಂಡ ಪ್ರಾದೇಶಿಕ ನಿರ್ದೇಶಕ ತದೇಸ್ಸ್ ಟಿಲಹುನ್ ಮಾತನಾಡಿ,

ಬೆಂಗಳೂರಿಗೆ ನಗರವನ್ನು ಸಂಪರ್ಕಿಸುವ ಉದ್ದೇಶದಿಂದ ನಾಲ್ಕು ದಿನಗಳ ಕಾಲ ನೇರ ವಿಮಾನ ಸೇವೆ ಆರಂಭಿಸಿದ್ದೇವೆ. ಅ.27 ರಿಂದ ಆರಂಭವಾಗುವ ವಿಮಾನಯಾನ ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಇಥಿಯೋಪಿಯದಿಂದ ಬೆಂಗಳೂರಿಗೆ ವಿಮಾನಗಳು ಹೊರಡಲಿದ್ದು, ಬೆಂಗಳೂರಿನಿಂದ ಮಂಗಳವಾರ ಗುರುವಾರ ಶನಿವಾರ ಗುರುವಾರ ಶನಿವಾರ ಮತ್ತು ಭಾನುವಾರ ವಿಮಾನ ಸಂಚರಿಸಲಿವೆ ಎಂದರು.

ಭಾರತಕ್ಕೆ ವಿಮಾನ ಸೇವೆ ವಿಸ್ತರಿಸುವ ಭಾಗವಾಗಿ ಈ ಸೇವೆ ಆರಂಭಿಸಿದ್ದು, ನಮಗೆ ಸಂತಸ ತಂದಿದೆ. ಆಫ್ರಿಕಾ ಮತ್ತು ದಕ್ಷಿಣ ಭಾರತಕ್ಕೆ ನೇರ ಕಾರ್ಯಮಾರ್ಗ ಸೇವೆ ಕಲ್ಪಿಸುತ್ತಿರುವುದರಲ್ಲಿ ನಾವೇ ಮೊದಲಿಗರು ಎಂದು ಹೇಳಿದರು.

ಪ್ರಸ್ತುತ ಮುಂಬೈ ಮತ್ತು ದೆಹಲಿ ನಡುವೆ ದಿನನಿತ್ಯ ಎರಡು ವಿಮಾನಗಳು ಹಾರಾಡುತ್ತಿವೆ. ನಗರಕ್ಕೆ ಏರ್ ಬಸ್ ಎ350, ಬೊಯಿಂಗ್ 787-8,787-9,777-200ಎಲ್ ಆರ್ ಸೇರಿದಂತೆ ವಿವಿಧ ಡಬಲ್ ಕ್ಯಾಬಿನ್‍ನಂತಹ ವಿಮಾನ ಸೇವೆಗಳು ದೊರೆಯಲಿ ಎಂದರು.

Facebook Comments