ವಿಚಾರಣೆಗೆ ಕರೆ ತಂದಿದ್ದ ಆಫ್ರಿಕನ್ ಪ್ರಜೆ ಹೃದಯಾಘಾತದಿಂದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.2- ಮಾದಕ ವಸ್ತು ಕಳ್ಳ ಸಾಗಾಣಿಕೆ ಆರೋಪದಡಿ ವಿಚಾರಣೆಗಾಗಿ ಕರೆ ತರಲಾಗಿದ್ದ ಆಫ್ರಿಕನ್ ಪ್ರಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 5 ಗ್ರಾಂ ಎಂಡಿಎಂಎ ಮಾದಕ ವಸ್ತು ಮಾತ್ರೆಗಳನ್ನು ಹೊಂದಿದ್ದ ಆಫ್ರಿಕನ್ ಪ್ರಜೆಯನ್ನು ಜೆ.ಸಿ.ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿಚಾರಣೆಗಾಗಿ ಕರೆ ತಂದಿದ್ದರು.

ಆತ ಎದೆನೋವು ಮತ್ತು ಶೀತ ಇದೆ ಎಂದು ಹೇಳಿದ್ದು ತಕ್ಷಣವೇ ಚಿರಾಯು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಇದು ಪೊಲೀಸ್ ವಶದಲ್ಲಿದ್ದಾಗಿನ ಸಾವು ಎಂದು ಪರಿಗಣಿಸಲಾಗುವುದಿಲ್ಲ. ಮೃತಪಟ್ಟ ಆಫ್ರಿಕನ್ ಪ್ರಜೆಯ ವಿಳಾಸ ಮತ್ತು ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments