ಬಿಬಿಎಂಪಿಗೆ ಚಳ್ಳೆ ಹಣ್ಣು ತಿನ್ನಿಸಿ ಆಫ್ರಿಕಾ ಪ್ರಜೆ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಬಂದಿದ್ದ ಸೋಂಕಿತ ವ್ಯಕ್ತಿಯೊಬ್ಬ ಬಿಬಿಎಂಪಿ ಸಿಬ್ಬಂದಿಗಳು ಹಾಗೂ ಹೋಟೆಲ್‍ನವರಿಗೆ ಚಳ್ಳೆಹಣ್ಣು ತಿನ್ನಿಸಿ ಆಫ್ರಿಕಾಕ್ಕೆ ಪರಾರಿಯಾಗಿರುವ ಘಟನೆ ನಡೆದಿದೆ. ಕಳೆದ 20 ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿ ನಗರದ ಶಾಂಗ್ರೀಲಾ ಹೋಟೆಲ್‍ನಲ್ಲಿ ತಂಗಿದ್ದ ಆತನಿಗೆ ಓಮಿಕ್ರಾನ್ ಸೋಂಕು ತಗುಲಿರುವ ಸಾಧ್ಯತೆ ಇದ್ದ ಹಿನ್ನಲೆಯಲ್ಲಿ ಆತನನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿತ್ತು.
ಆತನ ಸ್ಯಾಂಪಲ್ ಪಡೆದು ಜಿನೋಮ್ ಸಿಕ್ವೇನ್ಸ್ ಪರೀಕ್ಷೆಗೆ ರವಾನಿಸಲಾಗಿತ್ತು.

ಅದರ ವರದಿ ಇನ್ನು ಕೈ ಸೇರಿಲ್ಲ. ಇಂತಹ ಸಂದರ್ಭದಲ್ಲಿ ಆತ ಯಾರಿಗೂ ತಿಳಿಯದಂತೆ ಹೋಟೆಲ್ ತೊರೆದು ಪರಾರಿಯಾಗಿದ್ಧಾನೆ.
27 ರಂದು ಹೋಟೆಲ್ ಸಿಬ್ಬಂದಿಗಳಿಗೆ ನೆಗಿಟಿವ್ ವರದಿ ಸರ್ಟಿಫಿಕೇಟ್ ನೀಡಿ ನಾಪತ್ತೆಯಾಗಿದ್ದ. ಆತನ ಎಲ್ಲಿ ಹೋದ ಎಂದು ಪರಿಶೀಲಿಸಿದಾಗ ಆತನ ದಕ್ಷಿಣ ಆಫ್ರಿಕಾಕ್ಕೆ ಹಿಂತಿರುಗಿರುವುದು ಪತ್ತೆಯಾಗಿದೆ.

ಕ್ವಾರಂಟೈನ್‍ನಲ್ಲಿದ್ದ ವ್ಯಕ್ತಿ ಹೋಟೆಲ್ ಚೆಕ್‍ಔಟ್ ಮಾಡಿರುವ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡದೆ ಲೋಪವೆಸಗಿರುವ ಶಾಂಗ್ರಿಲಾ ಹೋಟೆಲ್ ಆಡಳಿತ ಮಂಡಳಿ ಪಾಲಿಕೆ ಆರೋಗ್ಯಾಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.

9 ಮಂದಿ ಪತ್ತೆಯಾದರು: ಓಮಿಕ್ರಾನ್ ಕಾಣಿಸಿಕೊಂಡ ದಕ್ಷಿಣ ಆಫ್ರಿಕಾದಿಂದ ನಗರಕ್ಕೆ ಬಂದು ನಾಪತ್ತೆಯಾಗಿದ್ದ ಇತರ ಒಂಬತ್ತು ಮಂದಿಯನ್ನು ಪತ್ತೆ ಹಚ್ಚುವಲ್ಲಿ ಬಿಬಿಎಂಪಿ ಯಶಸ್ವಿಯಾಗಿದೆ. ಓಮಿಕ್ರಾನ್ ಕಾಣಿಸಿಕೊಂಡ ನಂತರ ದಕ್ಷಿಣ ಆಫ್ರಿಕಾದಿಂದ ನಗರಕ್ಕೆ 72 ಮಂದಿ, ಚೈನಾದಿಂದ 15 ಮಂದಿ ಹಾಗೂ ಬೊಸ್ಟರಿಕಾದಿಂದ 14 ಮಂದಿ ಆಗಮಿಸಿದ್ದರು. ಆಫ್ರಿಕಾದಿಂದ ಬಂದಿದ್ದ 72 ಮಂದಿಯಲ್ಲಿ 41 ಮಂದಿ ನಗರದಲ್ಲಿ ನೆಲೆಸಿದ್ದರೆ ಉಳಿದವರು ಇತರ ಜಿಲ್ಲೆಗಳಿಗೆ ತೆರಳಿದ್ದರು.

ಹೀಗಾಗಿ ಬಿಬಿಎಂಪಿ ಅಧಿಕಾರಿಗಳು 41 ಮಂದಿಯ ಆರೋಗ್ಯ ತಪಾಸಣೆಗೆ ಮುಂದಾದಾಗ 21 ಮಂದಿಯ ವಿಳಾಸ ಪತ್ತೆ ಹಚ್ಚಿ ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಇಬ್ಬರಿಗೆ ಓಮಿಕ್ರಾನ್ ತಗುಲಿರುವುದು ದೃಢಪಟ್ಟಿತ್ತು.

ಈ ಬೆಳವಣಿಗೆ ನಂತರ ಆರು ಮಂದಿ ದಕ್ಷಿಣ ಆಫ್ರಿಕಾಕ್ಕೆ ವಾಪಸ್ಸಾಗಿದ್ದರು, ಹತ್ತು ಮಂದಿ ಆರೋಗ್ಯವಾಗಿದ್ದರೂ ಆದರೆ, ಉಳಿದ ಕೆಲವರು ನಾಪತ್ತೆಯಾಗಿದ್ದರು. ಬಿಬಿಎಂಪಿ ಅಕಾರಿಗಳು ನಾಪತ್ತೆಯಾದವರ ಪತ್ತೆಗೆ ಪೊಲೀಸರ ಸಹಕಾರ ಪಡೆದುಕೊಂಡು ಒಂಬತ್ತು ಮಂದಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಒಬ್ಬ ಮಾತ್ರ ಹೋಟೆಲ್ ಸಿಬ್ಬಂದಿಗೆ ನೆಗಿಟಿವ್ ವರದಿ ತೋರಿಸಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

Facebook Comments