ತಂದೆಯಿಂದಲೇ ಗುಂಡೇಟು ತಿಂದಿದ್ದ ಮಕ್ಕಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

Firing-Family
ಬೆಂಗಳೂರು, ಜೂ.23- ತಂದೆಯಿಂದಲೇ ಗುಂಟೇಟಿನಿಂದ ಗಾಯಗೊಂಡಿರುವ ಇಬ್ಬರು ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿ, ಜಯನಗರ ನಿವಾಸಿ ಗಣೇಶ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪತ್ನಿಯನ್ನು ಮೊನ್ನೆ ಹತ್ಯೆ ಮಾಡಿ ಮಕ್ಕಳನ್ನು ಕಾರಿನಲ್ಲಿ ತನ್ನ ರೆಸಾರ್ಟ್‍ಗೆ ಕರೆದೊಯ್ದು ನಿನ್ನೆ ಅಲ್ಲಿ ಇಬ್ಬರು ಮಕ್ಕಳ ಕಾಲಿಗೆ ಗುಂಡು ಹೊಡೆದಿದ್ದನು. ನಂತರ ಮೈಸೂರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಪೊಲೀಸರು ಈತನನ್ನು ಬಂಧಿಸಿ, ಗುಂಟೇಟಿನಿಂದ ಗಾಯಗೊಂಡಿದ್ದ ಇಬ್ಬರು ಮಕ್ಕಳನ್ನು ಕೋಣನಕುಂಟೆ ಕ್ರಾಸ್‍ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಇವರ ಇನ್ನೊಂದು ಮಗು ಸಂಬಂಧಿಕರ ಬಳಿ ಇದೆ.

12 ಎಕರೆ ಜಮೀನು:
ಕಗ್ಗಲಿಪುರ ಸಮೀಪದ ನೆಟ್ಟಿಗೆರೆ ಬಳಿ ಗಣೇಶ್‍ಗೆ ಸೇರಿದ ಸುಮಾರು 12 ಎಕರೆ ಜಮೀನಿದ್ದು, ಐದು ಎಕರೆ ಪ್ರದೇಶದಲ್ಲಿ ರೆಸಾರ್ಟ್ ಮಾಡಿ, ಈ ರೆಸಾರ್ಟ್‍ನಲ್ಲೇ ತಾನು ಉಳಿದುಕೊಳ್ಳಲು ಬಂಗಲೆಯನ್ನು ಸಹ ನಿರ್ಮಿಸಿದ್ದಾರೆ. ಉಳಿದ ಜಮೀನು ಜಾಗದಲ್ಲಿ ಲೇಔಟ್ ಮಾಡಿ ನಿವೇಶನಗಳನ್ನು ನಿರ್ಮಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin