ಜಾಲಿ ರೈಡ್ ತಂದ ಆಪತ್ತು : ಇಬ್ಬರ ಸಾವು, 15ಜನಕ್ಕೆ ಗಾಯ
ಈ ಸುದ್ದಿಯನ್ನು ಶೇರ್ ಮಾಡಿ
ಅಹ್ಮದಾಬಾದ್, ಜು. 15- ಅಮ್ಯೂಸ್ಮೆಂಟ್ ಪಾರ್ಕ್ಗಳು ಮುನ್ನೆಚ್ಚರಿಕೆ ಕೊರತೆಯಿಂದ ಮೃತ್ಯುಕೂಪಗಳಾಗುತ್ತಿವೆ. ರಜೆಯ ಖುಷಿಯಲ್ಲಿ ಜಾಲಿ ರೈಡ್ಗೆ ಬಂದಿದ್ದಾಗ ಸಂಭವಿಸಿದ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು 15 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದಿದೆ.
ಕಂಕರಿಯಾ ಲೇಕ್ ಫ್ರಾಂಟ್ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಿಗರು ಪೆಂಡುಲಮ್ ರೈಡ್ ಮಾಡುವಾಗ ಕೇಬಲ್ ತಂತಿಗಳು ಕಿತ್ತು ಹೋಗಿ ಈ ಅನಾಹುತ ಸಂಭವಿಸಿದ್ದು ಪರಿಣಾಮ ಇಬ್ಬರು ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.
ಮೃತರನ್ನು ಮನಾಲಿ (24) ಮತ್ತು ರಾಜ್ವಾದಿ (22) ಮೊಹಮ್ಮದ್ ಜಹೀದ್ ಮೊಮಿನ್ ಎಂದು ಗುರುತಿಸಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Facebook Comments