ಭಾರತದಲ್ಲಿ ಸೌರ, ಪವನ ಶಕ್ತಿ ಯೋಜನೆಗಳಿಗೆ ಎಐಐಬಿ 100 ದಶಲಕ್ಷಡಾಲರ್ ಹೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಸಿಂಗಪುರ್, ನ. 17-ಭಾರತದಲ್ಲಿ ಸೌರ ಮತ್ತು ಪವನ ಶಕ್ತಿ ಯೋಜನೆಗಳಿಗೆ ಏಷ್ಯಾ ಮೂಲ ಸೌಕರ್ಯಾಭಿವೃದ್ಧಿ ಹೂಡಿಕೆ ಬ್ಯಾಂಕ್ (ಏಷ್ಯನ್ ಇನ್‍ಫ್ರಾಸ್ಟ್ರಕ್ಚರ್ ಇನ್ವೆಸ್ಟ್‍ಮೆಂಟ್ ಬ್ಯಾಂಕ್-ಎಐಐಬಿ) ಮುಂದಿನ ತಿಂಗಳು ವಾರ್ಷಿಕ ಭಾರೀ ಪ್ರಮಾಣದ ಖಾಸಗಿ ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆ ಇದೆ.

ಭಾರತದಲ್ಲಿ 100 ದಶಲಕ್ಷ ಡಾಲರ್‍ಗಳ ವೆಚ್ಚದ ಹಸಿರು ಮತ್ತು ನವೀಕರಿಸಬಹುದಾದ ಯೋಜನೆಗಳಿಗೆ ಎಐಐಬಿ ಮುಂದಿನ ತಿಂಗಳು ಬಂಡವಾಳ ಹೂಡುವ ನಿರೀಕ್ಷೆ ಇದೆ ಎಂದು ಬ್ಯಾಂಕ್‍ನ ಮಹಾ ನಿರ್ದೇಶಕ(ಬಂಡವಾಳ ಹೂಡಿಕೆ ಕಾರ್ಯಾಚರಣೆಗಳು) ಪಾಂಗ್ ಯೀ ಎನ್ ತಿಳಿಸಿದ್ದಾರೆ.

ಸಿಂಗಪುರ್‍ನಲ್ಲಿ ನಿನ್ನೆರಾತ್ರಿ ನಡೆದ ದಕ್ಷಿಣ ಏಷ್ಯಾ ಅನಿವಾಸಿ ಭಾರತೀಯರ ಸಮಾವೇಶದಲ್ಲಿ ಮಾತನಾಡಿದ ಪಾಂಗ್, ಇನ್ನೊಂದು ತಿಂಗಳಿನಲ್ಲಿ ಭಾರತದ ನವೀಕರಿಸಬಹುದಾದ ಇಂಧನ ವಲಯದಲ್ಲಿ ಯೋಜನೆಗಳಿಗೆ ಸಮ್ಮತಿ ದೊರೆಯಲಿದೆ ಎಂದರು.

ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಪ್ರತಿ ವರ್ಷ ಭಾರತಕ್ಕೆ 100 ದಶಲಕ್ಷ ಡಾಲರ್‍ಗಳನ್ನು ಗಾಳಿ ಮತ್ತು ಸೌರಶಕ್ತಿ ಯೋಜನೆಗಳಲ್ಲಿ ಬಂಡವಾಳ ಹೂಡಲಾಗುವುದು. ನವೀಕರಿಸಬಹುದಾದ ಯೋಜನೆಗಳಿಗೆ ಖಾಸಗಿ ವಲಯಕ್ಕೆ ವಿಶೇಷ ಉತ್ತೇಜನ ನೀಡಲಾಗುವುದು ಎಂದು ಅವರು ತಿಳಿಸಿದರು.

Facebook Comments

Sri Raghav

Admin