‘ಮತ್ತೆ ವಿಚಾರಣೆಗೆ ಕರೆದರೆ ಹೋಗ್ತೀನಿ’ : ನಟಿ ಐಂದ್ರಿತಾ ರೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17- ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತಮಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ. ಮತ್ತೆ ವಿಚಾರಣೆಗೆ ಕರೆದರೆ ಹೋಗುತ್ತೇವೆ ಎಂದು ನಟಿ ಐಂದ್ರಿತಾ ರೈ ಪ್ರತಿಕ್ರಿಯಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿನ ತಮ್ಮ ನಿವಾಸದ ಬಳಿ ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿ, ಈ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ನಾವು ಏನೂ ಮಾತನಾಡೋ ಹಾಗಿಲ್ಲ. ನಾವು ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ ಎಂದರು.

ಸಿಸಿಬಿಯವರು ಮತ್ತೆ ಯಾವಾಗ ಕರೆಯುತ್ತಾರೋ ಗೊತ್ತಿಲ್ಲ. ನಾಳೆಯಿಂದ ದಿಗಂತ್ ಅವರು ಶೂಟಿಂಗ್‍ಗೆ ಹೋಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಐಂದ್ರಿತಾ ರೈ ಉತ್ತರಿಸಿದರು.

ಸಿಸಿಬಿ ಪೊಲೀಸರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ. ತಮಗೆ ತಿಳಿದಿರುವ ವಿಷಯವನ್ನು ಅವರಿಗೆ ತಿಳಿಸಿದ್ದೇವೆ ಎಂದು ಅವರು ಹೇಳಿದರು. ಈ ನಡುವೆ ಎನ್‍ಸಿಬಿ ಕೂಡ ಇವರು ಹೋಗಿದ್ದ ಪಾರ್ಟಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಅದೇನಾದರೂ ಲಭ್ಯವಾದರೆ ಎನ್‍ಸಿಬಿ ವಿಚಾರಣೆಯನ್ನು ಸಹ ಇವರು ಎದುರಿಸುವ ಸಾಧ್ಯತೆ ಇದೆ.

Facebook Comments