13 ಜನರಿದ್ದ ವಾಯುಪಡೆಯ ಎಎನ್-32 ವಿಮಾನ ನಾಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮೇಲೆ ಹಾರಿದ ಕೆಲವೇ ನಿಮಿಷದಲ್ಲಿ ಸಂಪರ್ಕ ಕಡಿದುಕೊಂಡ ವಾಯುಪಡೆ ವಿಮಾನ  ಜೈಪುರ, ಜೂ.3- ಭಾರತೀಯ ವಾಯುಪಡೆಯ ವಿಮಾನವೊಂದು ಮೇಲೇರಿದ ಕೆಲವೇ ನಿಮಿಷದಲ್ಲಿ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.

ಜೋಹಾರ್ಕ್ ವಾಯು ನೆಲೆಯಿಂದ ಮೇಲೆ ಹಾರಿದ್ದ ಎಎನ್-32 ವಿಮಾನ ಜೋಹಾರ್ಕ್ ವಾಯು ನೆಲೆಯಿಂದ ಮೇಲೆ ಹಾರಿ ಮಧ್ಯಾಹ್ನ 12.45ರಲ್ಲಿ ಮೇಲೆ ಹಾರಿದ್ದು , ಎಟಿಆರ್‍ನಿಂದ ಒಂದು ಗಂಟೆ ಸಮಯದಲ್ಲಿ ಸಂಪರ್ಕ ಕಡಿತಗೊಂಡಿದೆ.

ವಿಮಾನದಲ್ಲಿ 8 ಮಂದಿ ಐಎಫ್ ಸಿಬ್ಬಂದಿಗಳು ಹಾಗೂ ಐವರು ನಾಗರಿಕರು ಸೇರಿ 13 ಜನ ಇದ್ದರು ಎಂದು ಹೇಳಲಾಗುತ್ತಿದೆ.

ವಿಮಾನ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದು ಅಪಘಾತಕ್ಕೀಡಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಮಿಗ್ ಹಾಗೂ ಸುಖೋಯ್ ಯುದ್ಧ ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin