ರಾಷ್ಟ್ರಪತಿ, ಪ್ರಧಾನಿ ಭದ್ರತೆಗೆ ಅಮೆರಿಕದಿಂದ ಬಂತು ಏರ್ ಇಂಡಿಯಾ ಒನ್ ವಿಮಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.1- ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರ ಅತ್ಯಂತ ಸುರಕ್ಷಿತ ಪ್ರಯಾಣಕ್ಕಾಗಿ ಏರ್ ಇಂಡಿಯಾ ಒನ್ (ಬೋಯಿಂಗ್-777) ವಿಶೇಷ ವಿಮಾನ ಇಂದು ಸಂಜೆ ಅಮೆರಿಕದಿಂದ ಭಾರತಕ್ಕೆ ಆಗಮಿಸಿದೆ.

ಟೆಕ್ಸಾಸ್‍ನಿಂದ ಹೊರಟಿರುವ ವಿಮಾನ ಇಂದು ಸಂಜೆ 3 ಗಂಟೆ ನಂತರ ದೆಹಲಿಯ ಇಂದಿರಾಗಾಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಈ ವಿಮಾನವು ಅಮೆರಿಕದಲ್ಲಿ ತಯಾರಾಗಿದ್ದು, ಯುಎಸ್‍ಎ ಅಧ್ಯಕ್ಷರಿಗಾಗಿಯೇ ವಿಶೇಷವಾಗಿ ನಿರ್ಮಿಸಲಾಗಿರುವ ಏರ್ ಫೋರ್ಸ್ -1 ಮಾದರಿಯ ಎಲ್ಲ ಸುರಕ್ಷತೆ, ಸೌಲಭ್ಯ ಮತ್ತು ಸೌಕರ್ಯಗಳನ್ನು ಹೊಂದಿವೆ.

ಏರ್ ಇಂಡಿಯಾ-1 ವಿಮಾನ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಒಳಗೊಂಡಿದ್ದು, ಬಿ-777 ಮೇಲೆ ನಡೆಯಬಹುದಾದ ಯಾವುದೇ ದಾಳಿಯನ್ನು ಪ್ರತಿರೋಸುವ ವಿಶೇಷ ಕ್ಷಿಪಣಿ ವ್ಯವಸ್ಥೆ ಮತ್ತು ಸ್ವಯಂ ರಕ್ಷಣಾ ಸೌಕರ್ಯಗಳನ್ನು ಹೊಂದಿದೆ.

ಇದೇ ಮೊದಲ ಬಾರಿಗೆ ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರಿಗಾಗಿ ಅತ್ಯಂತ ಭದ್ರತೆಯ ಈ ವಿಮಾನಯಾನ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಕಳೆದ ಆಗಸ್ಟ್‍ನಲ್ಲೇ ಈ ವಿಮಾನ ಭಾರತಕ್ಕೆ ಬರಬೇಕಿತ್ತು. ತಾಂತ್ರಿಕ ಸಮಸ್ಯೆಗಳಿಂದಾಗಿ ಆಗಮನ ವಿಳಂಬವಾಯಿತು.

ಅಮೆರಿಕದ ಟೆಕ್ಸಾಸ್ ಪ್ರಾಂತ್ಯದ ಬೋಯಿಂಗ್ ವಿಮಾನ ತಯಾರಿಕಾ ಸಂಸ್ಥೆ ಏರ್ ಇಂಡಿಯಾ-1 ವಿಮಾನವನ್ನು ವಿಶೇಷವಾಗಿ ನಿರ್ಮಿಸಿದ್ದು, ಟೆಕ್ಸಾಸ್‍ನಿಂದ ಇಂದು ಅಪರಾಹ್ನ ಭಾರತಕ್ಕೆ ಆಗಮಿಸಿದೆ. ಈವರೆಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿಯವರು ಬಿ-747 ವಿಮಾನವನ್ನು ಮಾತ್ರ ಸಂಚಾರಕ್ಕೆ ಬಳಸುತ್ತಿದ್ದರು.

Facebook Comments

Sri Raghav

Admin