ಕೇರಳದಲ್ಲಿ ರನ್​ವೇಯಿಂದ ಜಾರಿದ ಏರ್​ ಇಂಡಿಯಾ ವಿಮಾನ, 20ಕ್ಕೂ ಹೆಚ್ಚು ಮಂದಿ ಸಾವು?

ಈ ಸುದ್ದಿಯನ್ನು ಶೇರ್ ಮಾಡಿ

ಕ್ಯಾಲಿಕಟ್, ಅ 7- ದುಬೈನಿಂದ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಲ್ಯಾಂಡ್‍ಂಗ್ ಆಗುವ ವೇಳೆ ರನ್ ವೇಯಲ್ಲಿ ಜಾರಿದ ಪರಿಣಾಮ ಪೈಲೆಟ್ ಸೇರಿದಂತೆ 20 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ಸಂಭವಿಸಿದೆ. ಭಾರೀ ಮಳೆ ಬರುತ್ತಿರುವಾಗಲೇ ಈ ಅವಘಡ ಸಂಭವಿಸಿದೆ.ಮಂಗಳೂರಿನಲ್ಲಿ ನಡೆದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪತನದ ಮಾದರಿಯಲ್ಲಿ ಈ ಘಟನೆ ನಡೆದಿದೆ.

ದುಬೈನಿಂದ ಕೇರಳದ ಕೊಜಿಕೊಡ್ ಗೆ ಹೊರಟಿದ್ದ ಏರ್ ಇಂಡಿಯಾದ Iಘಿ1344 ವಿಮಾನವು ಶುಕ್ರವಾರ ಸಂಜೆ 7.45ರ ವೇಳೆಗೆ ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಘಟನೆಯಲ್ಲಿ ವಿಮಾನದ ಮುಖ್ಯ ಪೈಲೆಟ್ ದೀಪಕ್ ವಸಂತ್ ಹಾಗೂ ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದು, ಅನೇಕ ಮಂದಿ ಪ್ರಯಾಣಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಾಗರೀಕ ವಿಮಾನಯಾನ ಮಹಾನಿದೇರ್ಶಕರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪೈಲಟ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ನಾಗರೀಕ ವಿಮಾನಯಾನ ಸಚಿವಾಲಯ ಈ ಅಪಘಾತದ ತನಿಖೆಗೆ ಆದೇಶಿಸಿದೆ.

ಗಾಯಾಳುಗಳನ್ನು ಕ್ಯಾಲಿಕಟ್ ಅಸ್ಪÀ್ಪತ್ರೆಗೆ ದಾಖಲಿಸಲಾಗಿದ್ದು, ವಿಮಾನದಲ್ಲಿ 180 ಪ್ರಯಾಣಿಕರು, 10 ಮಕ್ಕಳು ಹಾಗೂ 5 ಮಂದಿ ಸಿಬ್ಬಂಧಿ ಸೇರಿದಂತೆ 195 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಸ್ಥಳಕ್ಕೆ ಎನ್ ಡಿಆರ್ ಎಪ್ ತಂಡ ಆಗಮಿಸಿ ರಕ್ಷಣಾ ಕಾರ್ಯಾದಲ್ಲಿ ತೊಡಗಿದೆ.ಜೊತೆಗೆ 24 ಕ್ಕೂ ಅಂಬುಲೆನ್ಸ್ ಗಳು ಗಾಯಾಳುಗಳನ್ನು ಅಸ್ಪತ್ರೆಗೆ ಕರೆದೊಯ್ಯುವ ಕಾರ್ಯದಲ್ಲಿ ತೊಡಗಿವೆ.ಆಪಾಘಾತ ಎಷ್ಟು ಭೀಕರವಾಗಿದೆ ಎಂದರೆ, ವಿಮಾನವು ಎರಡು ತುಂಡಾಗಿದ್ದು, ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.

ದುಬೈನಿಂದ ಹೊರಟಿದ್ದ ವಂದೇ ಮಾತರಂ ಗೆ ಸೇರಿದ ಏರಿ ಇಂಡಿಯಾ ವಿಮಾನವು ಕ್ಯಾಲಿಕಟ್ ಗೆ ರಾತ್ರಿ 7.45 ಕ್ಕೆ ಆಗಮಿಸಿತು. ಲ್ಯಾಂಡಿಗ್ ಆಗುವ ಸಂದರ್ಭದಲ್ಲಿ ಅಪ್ಪಳಿಸಿದ ಪರಿಣಾಮ ವಿಮಾನ ರನ್ ವೇ ಬಿಟ್ಟು ಜಾರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆ. ಸಮರೋಪಾದಿಯಲ್ಲಿ ಎನ್ ಡಿಆರ್‍ಎಫ್ ತಂಡವು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.ಕೇರಳ ಪೊಲೀಸ್ ಅಧಿಕಾರಿಗಳ ಪ್ರಕಾರ, ಕನಿಷ್ಠ 35 ಮಂದಿ ಗಾಯಗೊಂಡಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

Facebook Comments