‘ಏರ್‌ಶೋ-2021’ ಹಿನ್ನೆಲೆಯಲ್ಲಿ ಮಾಂಸ ಮಾರಟ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯ ಎ.ಎಸ್.ಎಫ್ ನಲ್ಲಿ ದಿನಾಂಕ: 03.02.2021 ರಿಂದ 07.02.2021 ರವರೆಗೆ ಅಂತಾರಾಷ್ಟ್ರೀಯ ಮಟ್ಟದ ‘ಏರ್‌ಶೋ-2021’ ನಡೆಯಲಿರುವ ಹಿನ್ನೆಲೆಯಲ್ಲಿ ಯಲಹಂಕ ಏರ್ ಪೋರ್ಸ್ ಸ್ಟೇಷನ್ ಸುತ್ತಮುತ್ತಲಿನ 10 ಕಿ.ಮೀ ಪ್ರದೇಶದ ವ್ಯಾಪ್ತಿಯಲ್ಲಿ ದಿನಾಂಕ: 17.01.2021 ರಿಂದ 09.02.2021 ರವರೆಗೆ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚುವುದು ಹಾಗೂ ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿರುತ್ತದೆ.

ಇದನ್ನು ಉಲ್ಲಂಘಿಸಿದಲ್ಲಿ ಕೆ.ಎಂ.ಸಿ ಕಾಯ್ದೆ 1976 ರ ಸೆಕ್ಷನ್ 2(22) ಹಾಗೂ ಸೆಕ್ಷನ್ 353(5) ರಂತೆ ಮತ್ತು ಭಾರತೀಯ ಎರ್‌ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ರೀತ್ಯಾ ಕ್ರಮವಹಿಸಲಾಗುವುದೆಂದು ವಲಯದ ಜಂಟಿ ಆಯುಕ್ತರು ರವರು ತಿಳಿಸಿದ್ದಾರೆ.

Facebook Comments

Sri Raghav

Admin