ದಾಲ್ ಲೇಕ್‍ನಲ್ಲಿ ಘರ್ಜಿಸಿದ ಭಾರತೀಯ ಯುದ್ಧ ವಿಮಾನಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.26- ಭಾರತ ಸ್ವಾತಂತ್ರ್ಯ ಗಳಿಸಿದ 75ನೇ ವರ್ಷಾಚರಣೆಯ ಅಂಗವಾಗಿ ಭಾರತೀಯ ವಾಯುಸೇನೆ ಜಮ್ಮು-ಕಾಶ್ಮೀರದ ದಾಲ್ ಲೇಕ್‍ನಲ್ಲಿ ಏರ್ ಶೋ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಯುದ್ಧ ವಿಮಾನಗಳು ಸೇರಿದಂತೆ ಭಾರತೀಯ ವಾಯು ಪಡೆಯ ವಿಮಾನಗಳು ನೀಲಾಕಾಶದಲ್ಲಿ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶನ ಮಾಡಿದವು.

ಪೈಲೆಟ್‍ಗಳು ಮೋಡವನ್ನು ಸೀಳಿಕೊಂಡು ಯುದ್ಧ ವಿಮಾನವನ್ನು ನುಗ್ಗಿಸುವಾಗ ಕಿವಿಗವುಚ್ಚುತ್ತಿದ್ದ ಶಬ್ದ ಭಾರತ ಪ್ರಜಾಪ್ರಭುತ್ವದ ಝೇಂಕಾರದಂತಿತ್ತು. ಭಾರತಕ್ಕೆ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯನ್ನು ಇತ್ತೀಚೆಗಷ್ಟೆ ಆಚರಿಸಲಾಗಿದೆ.

ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಾನಾ ರೀತಿಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಅದರ ಭಾಗವಾಗಿ ಜಮ್ಮ ಕಾಶ್ಮೀರದಲ್ಲಿ ಏರ್ ಶೋ ಆಯೋಜಿಸಲಾಗಿತ್ತು. ಕೇಂದ್ರ ಸರ್ಕಾರದ ಹಲವು ಸಚಿವರು, ಸ್ಥಳೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook Comments