ಶ್ರೀನಗರದ ದಾಲ್ ಸರೋವರದ ಮೇಲೆ ಏರ್ ಶೋ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಸೆ.15-ಭಾರತೀಯ ವಾಯುಪಡೆಯು ಸೆ.26 ರಂದು ಕಾಶ್ಮೀರದ ಯುವಕರನ್ನು ಸೇನೆಗೆ ಪ್ರೇರೇಪಿಸುವ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಪ್ರಸಿದ್ಧ ದಾಲ್ ಸರೋವರದ ಮೇಲೆ ಏರ್ ಶೋ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದರ್ಶನದಲ್ಲಿ 3,000 ಕ್ಕೂ ಹೆಚ್ಚು ಶಾಲಾ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಕಣಿವೆಯ ಯುವಕರನ್ನು ಭಾರತೀಯ ವಾಯುಪಡೆಗೆ ಸೇರಲು ಪ್ರೇರೇಪಿಸುವುದು ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯಾಗಿದೆ ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ಪಾಂಡುರಂಗ ಕೆ ಪೋಲ್ ಹೇಳಿದರು.

ಆಜÁದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಐಎಎಫ್ ನಡೆಸುತ್ತಿರುವ ಏರ್ ಶೋನಲ್ಲಿ ವಿದ್ಯಾರ್ಥಿಗಳನ್ನು ಕರೆ ತರುವ ಕುರಿತು ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರ ಜೊತೆ ಸಭೆನಡೆಸಲಾಗಿದೆ. ನಿಮ್ಮ ಕನಸುಗಳಿಗೆ ರೆಕ್ಕೆಗಳನ್ನು ನೀಡಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪ್ರದರ್ಶನವು ನಡೆಯಲ್ಲಿದು ವಿದ್ಯಾರ್ಥಿಗಳಲ್ಲಿ ಅವರ ಕನಸುಗಳಿಗೆ ರೆಕ್ಕೆಗಳನ್ನು ನೀಡುವ ಉತ್ಸಾಹವನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳ ಜೊತೆಗೆ 700 ಶಿಕ್ಷಕರು ಕೂಡ ಸ್ಥಳದಲ್ಲಿ ಹಾಜರಿರುತ್ತಾರೆ.

ಐಎಎಫ್ ವಿಮಾನಗಳ ಪ್ರಭಾವಶಾಲಿ ಕುಶಲತೆಯನ್ನು ವೀಕ್ಷಿಸಲು 3,000 ಕ್ಕೂ ಹೆಚ್ಚು ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದು ಐಎಎಫ್ ಮತ್ತು ವಾಯುಯಾನ ಕ್ಷೇತ್ರದಲ್ಲಿ ವೃತ್ತಿಜೀವನದ ಕನಸು ಕಾಣಲು ಪ್ರೇರೇಪಿಸುತ್ತದೆ ಎಂದು ವಕ್ತಾರರು ತಿಳಿಸಿದ್ದಾರೆ.

Facebook Comments