ಆಫ್ಘಾನಿಸ್ತಾನದಲ್ಲಿ ಅಮೆರಿಕಾ ವಾಯು ದಾಳಿಯಲ್ಲಿ 30 ಮಂದಿ ನಾಗರಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಅ.9- ಪಶ್ಚಿಮ ಆಫ್ಘಾನಿಸ್ತಾನದಲ್ಲಿ ಮಾದಕ ವಸ್ತು ತಯಾರಿಕೆ ಮತ್ತು ಬೆಲೆಗಳನ್ನು ಗುರಿಯಾಗಿಟ್ಟುಕೊಂಡು ಅಮೆರಿಕ ಸೇನೆ ಇತ್ತೀಚೆಗೆ ನಡೆಸಿದ ವಾಯು ದಾಳಿಯಲ್ಲಿ 30 ಮಂದಿ ನಾಗರಿಕರು ಬಲಿಯಾಗಿ 9 ಮಂದಿ ತೀವ್ರ ಗಾಯಗೊಂಡಿದ್ದಾರೆ.

ಆಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ನೆರವು ಏಜೆನ್ಸಿ ಈ ಹೇಳಿಕೆ ನೀಡಿದೆ. ಆದರೆ ಇದನ್ನು ಅಮೆರಿಕಾ ರಕ್ಷಣಾ ಇಲಾಖೆ ಪೆಂಟಗನ್ ಈ ಹೇಳಿಕೆಯನ್ನು ನಿರಾಕರಿಸಿದೆ.

ಪಶ್ಚಿಮ ಆಫ್ಘಾನಿಸ್ತಾನದ ಮಾದಕ ವಸ್ತು ತಯಾರಿಕೆಯ ಹಲವು ಪ್ರದೇಶಗಳ ಮೇಲೆ ಅಮೆರಿಕಾ ಬಾಂಬರ್ ವಿಮಾನಗಳು ದಾಳಿ ನಡೆಸಿದವು. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 30 ಮಂದಿ ಹತರಾದರು.

ದಾಳಿಯಲ್ಲಿ ಗಾಯಗೊಂಡಿರುವ 9 ಜನರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ ಎಂದು ಏಜೆನ್ಸಿ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಅಮೆರಿಕ ಮತ್ತು ತಾಲಿಬಾನ್ ಮಾತುಕತೆ ಮುರಿದು ಬಿದ್ದ ನಂತರ ಆಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ಉಗ್ರಗಾಮಿಗಳ ದಾಳಿ ಮತ್ತು ಅವರನ್ನು ನಿಗ್ರಹಿಸುವ ಸೇನೆ ಕಾರ್ಯಾಚರಣೆ ತೀವ್ರಗೊಂಡಿದೆ.

Facebook Comments