ಪಾಕ್‍ನಲ್ಲೂ ‘ಡಿ ಬಾಸ್’ ಹವಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.18- ರಾಕಿಂಗ್‍ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರವು ಪಾಕಿಸ್ತಾನದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಗಮನ ಸೆಳೆದಿದ್ದರೆ, ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗುವ ಮೂಲಕ ಡಿ ಬಾಸ್ ಹವಾ ಸೃಷ್ಟಿಯಾಗಿದೆ.

2015ರಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ನಿರ್ದೇಶಿಸಿದ್ದ ಐರಾವತ ಚಿತ್ರವು ಗ್ಯಾಂಗ್‍ಸ್ಟರ್ ಎಂಬ ಹೆಸರಿನಲ್ಲಿ ಉರ್ದುವಿನ ಆವೃತ್ತಿಯ ಸಿನಿಮಾವು ಪಾಕಿಸ್ತಾನದಲ್ಲಿ ಪ್ರದರ್ಶನವಾಗುತ್ತಿದೆ.

ಪಾಕಿಸ್ತಾನದಲ್ಲಿ ಸಲ್ಮಾನ್‍ಖಾನ್ ಅಭಿನಯದ ಭಜರಂಗಿ ಭಾಯ್‍ಜಾನ್ ಚಿತ್ರವು ತೆರೆಕಂಡಿತ್ತು. ಆ ಚಿತ್ರವನ್ನು ನಿರ್ಮಿಸಿದ್ದು ಕನ್ನಡಿಗರಾದ ರಾಕ್‍ಲೈನ್‍ವೆಂಕಟೇಶ್ ಎಂಬುದು ಹೆಮ್ಮೆ. ಆ ನಂತರ ಬಿಡುಗಡೆಗೊಂಡ ಕೆಜಿಎಫ್‍ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು ಈಗ ಐರಾವತ ಚಿತ್ರ ಪ್ರದರ್ಶನ ಕಂಡಿರುವುದನ್ನು ನೋಡಿದರೆ ಇನ್ನು ಅನೇಕ ಕನ್ನಡ ಚಿತ್ರಗಳು ಅಲ್ಲಿ ಪ್ರದರ್ಶನವಾಗುವ ಸೂಚನೆಗಳು ಸಿಕ್ಕಂತಾಗಿದೆ.

Facebook Comments