ಮುಂದಿನ ವರ್ಷದಿಂದ ಕಾರ್ಯರಂಭ ಮಾಡಲಿದೆ ವಿಮಾನವಾಹಕ ನೌಕೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ,ಜೂ.25-ದೇಶದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್‍ಸಿಂಗ್ ತಿಳಿಸಿದ್ದಾರೆ. ಕೊಚ್ಚಿ ಶಿಫ್‍ಯಾರ್ಡ್‍ನಲ್ಲಿ ನಿರ್ಮಿಸುತ್ತಿರುವ ಐಎಸಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಆತ್ಮನಿರ್ಭರ ಭಾರತ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಐಎಸಿ ಭಾರತದ ಹೆಮ್ಮೆಯ ಸಂಕೇತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶ 75 ನೆ ವರ್ಷದ ಸ್ವಾತಂತ್ರೊತ್ಸವ ಆಚರಿಸಿಕೊಳ್ಳುತ್ತಿರುವ ಮುಂದಿನ ವರ್ಷ ಐಎಸಿಯನ್ನು ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments