500 ಜನರ ರಕ್ಷಣೆ: ಏರ್‌ಚೀಫ್ ಮಾರ್ಷಿಯಲ್ ಘೋಟಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಉತ್ತರ ಕರ್ನಾಟಕದ ಭಾಗದಲ್ಲಿ ಮಳೆ ಮತ್ತು ನೆರೆ ಹಾವಳಿ ಹಿನ್ನೆಲೆಯಲ್ಲಿ ಸಿಲುಕಿದ್ದ ಸುಮಾರು 500 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಏರ್‍ಚೀಫ್ ಮಾರ್ಷಿಯಲ್ ಎಸ್.ಕೆ.ಘೋಟಿಯಾ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 55 ರಕ್ಷಣಾ ಕಾರ್ಯಪಡೆ ರಚಿಸಿ ನಿನ್ನೆಯವರೆಗೆ 355 ಜನರನ್ನ ರಕ್ಷಿಸಲಾಗಿದೆ. ಇಂದು 200 ಜನರನ್ನು ರಕ್ಷಿಸಲಾಗಿದೆ ಎಂದರು.

ಕಳೆದ ಒಂದು ವಾರದಿಂದ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದೇವೆ. ಕರ್ನಾಟಕದ ಜನರ ರಕ್ಷಣೆಗಾಗಿ ಶ್ರಮಿಸುತ್ತಿದ್ದೇವೆ.  ಏರ್ ಕಮಾಂಡೋ ರವಿಶಂಕರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಂಡಿಯನ್ ಏರ್ ಪೋರ್ಸ್ ಮತ್ತು ಇಂಡಿಯನ್ ನೇವಿ ಹೆಲಿಕಾಪ್ಟರ್ ಮೂಲಕ ನೂರಾರು ಜನರ ರಕ್ಷಣೆ ಮಾಡಲಾಗಿದೆ. ಇನ್ನು ಹಂಪಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಅಲ್ಲಿ ಸ್ಥಳೀಯ ಮತ್ತು ವಿದೇಶಿಗರೂ ಸೇರಿದಂತೆ 200 ಜನರ ರಕ್ಷಣೆ ಮಾಡಲಾಗಿದೆ. ನಮ್ಮ ರಕ್ಷಣಾ ಕಾರ್ಯಾಚರಣೆ ತಂಡದ ಜೊತೆಗೆ ರಾಜ್ಯ ಸರ್ಕಾರ ನಿರಂತರವಾಗಿ ಸಂಪರ್ಕದಲ್ಲಿ ಇದೆ ಎಂದರು.

Facebook Comments