ಶಾಕಿಂಗ್: ಏರ್ಪೋರ್ಟ್ ಟಾಯ್ಲೆಟ್‍ನಲ್ಲಿತ್ತು 79 ಲಕ್ಷ ರೂ. ಮೌಲ್ಯದ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಏ.26- ರಾಜಧಾನಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯವೊಂದರಲ್ಲಿ 79 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ಈ ಸಂಬಂಧ 21 ವರ್ಷದ ಯುವಕನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಅಬುಧಾಬಿಯಿಂದ ದೆಹಲಿಗೆ ಬರಲಿರುವ ವಿಮಾನದ ಪ್ರಯಾಣಿಕರೊಬ್ಬರ ಬಳಿ 79 ಲಕ್ಷ ರೂ. ಮೌಲ್ಯದ ಚಿನ್ನವಿದೆ ಎಂಬ ಖಚಿತ ಮಾಹಿತಿ ಕಸ್ಟಮ್ಸ್ ಅಧಿಕಾರಿಗಳಿಗೆ ಲಭಿಸಿತ್ತು.

ಇಂದು ಬೆಳಗ್ಗೆ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆ ಅಧಿಕಾರಿಗಳು ಪ್ರಯಾಣಿಕರನ್ನು ತಪಾಸಣೆ ನಡೆಸಿದರು. ಅನುಮಾನಸ್ಪದ ಯುವಕನೊಬ್ಬ ಶೌಚಾಲಯದಿಂದ ಬರುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದರು.

ತಾನು ಶೌಚಾಲಯದಲ್ಲಿ 2.49ಕೆಜಿ ತೂಕದ 20 ಚಿನ್ನದ ಗಟ್ಟಿಗಳನ್ನು ಬಚ್ಚಿಟ್ಟಿರುವುದಾಗಿ ತಿಳಿಸಿದ. ನಂತರ ಮಾಲನ್ನು ವಶಪಡಿಸಿಕೊಂಡು ಆತನನ್ನು ಬಂಧಿಸಲಾಯಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ