60 ಕೋಟಿ ಮೌಲ್ಯದ ಬ್ರಹತ್ ಬಂಗಲೆ ಖರೀದಿಸಿದ ಅಜಯ್ ದೇವಗನ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ,1- ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ಅವರು ತಮ್ಮ ಮನೆಯ ಅಣತಿ ದೂರದಲ್ಲೇ 60 ಕೋಟಿ ಮೌಲ್ಯದ ದೊಡ್ಡ ಬಂಗ್ಲೆಯನ್ನು ಖರೀದಿ ಮಾಡಿದ್ದಾರೆ. ಮುಂಬೈನ ಜುಹುನಲ್ಲಿ ಬೃಹತ್ ಬಂಗಲೆ ಎಂದೇ ಹೇಳಲಾಗುವ ಈ ಮನೆ ಪ್ರಸ್ತುತ ಈಗಿರುವ ಮನೆ ಶಿವಶಕ್ತಿಯಿಂದ ಸ್ವಲ್ಪ ದೂರದಲ್ಲೇ ಇದೆ ಎಂದು ನಟನ ಕಚೇರಿ ವಕ್ತಾರರು ತಿಳಿಸಿದ್ದಾರೆ.

ತಾವಿರುವ, ಪ್ರಸ್ತುತ ಈಗ ವಾಸವಿರುವ ಮನೆಯ ಸಾಲಿನಲ್ಲೇ ಈ ಆಸ್ತಿಯನ್ನು ಖರೀದಿಸಿದ್ದಾರೆ. ಅವರೇ ಖುದ್ದು ಇದಕ್ಕಾಗಿ ಭರಿಸಿರುವ ವೆಚ್ಚವನ್ನು ನಿರ್ದಿಷ್ಟಪಡಿಸಿಲ್ಲ. ಮೂಲಗಳ ಪ್ರಕಾರ ಇದು ಸುಮಾರು 60 ಕೋಟಿ ಮೌಲ್ಯದ ಆಸ್ತಿ ಎಂದು ಅಂದಾಜಿಸ್ಲಾಗಿದೆ ಅಜಯ್ ಮತ್ತು ಅವರ ಪತ್ನಿ ನಟಿ ಕಾಜೋಲ್ ಕಳೆದ ಒಂದು ವರ್ಷದಿಂದ ಹೊಸ ಮನೆ ಹುಡುಕಾಟದಲ್ಲಿದ್ದರು.

ಅಜಯ್ ಮನೆಯ ಸುತ್ತಮುತ್ತಲೇ ಇರುವ ಇತರ ಬಾಲಿವುಡ್ ನಟರು ಕೂಡ ಹೊಸ ಮನೆ ಖರೀದಿ ಮಾಡಿದ್ದು,ಇದರಲ್ಲಿ ಅಕ್ಷಯ್ ಕುಮಾರ್, ಹೃತಿಕ್ ರೋಷನ್, ಧರ್ಮೇಂದ್ರ ಮತ್ತು ಅಮಿತಾಬ್ ಬಚ್ಚನ್ ಸೇರಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಅಮಿತಾಬ್ 31 ಕೋಟಿ ಮೌಲ್ಯದ ಅಪಾರ್ಟ್ಮೆಂಟ್ ಖರೀದಿಸಿ ಏಪ್ರಿಲ್ ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Facebook Comments