ಅಜಯ್‍ ದೇವಗನ್‍ ತಂದೆ ವೀರೂ ದೇವಗನ್ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 27- ಬಾಲಿವುಡ್‍ನ ಖ್ಯಾತ ತಾರೆ ಅಜಯ್‍ ದೇವಗನ್‍ರ ತಂದೆ, ಬಿಗ್‍ಟೌನ್‍ನ ಸಾಹಸ ನಿರ್ದೇಶಕ ವೀರೂ ದೇವಗನ್ ಇಂದು ಬೆಳಗ್ಗೆ ಇಹಲೋಕದ ಪ್ರಯಾಣ ಮುಗಿಸಿದ್ದಾರೆ.

1980ರ ದಶಕದಲ್ಲಿ ಬಾಲಿವುಡ್‍ನ ನಂಬರ್ 1 ಸಾಹಸ ನಿರ್ದೇಶಕರಾಗಿದ್ದ ವೀರೂ ದೇವಗನ್ ತಮ್ಮ ಪುತ್ರ ಅಜಯ್‍ದೇವಗನ್‍ರನ್ನು ಕೂಡ ಸಾಹಸಮಯ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ್ದರು.

ಸಾಹಸ ನಿರ್ದೇಶಕನಾಗಿ ಅಲ್ಲದೆ ನಟ , ಸಹ ನಿರ್ದೇಶಕರಾಗಿಯೂ ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದ ವೀರೂ ದೇವಗನ್, ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಬಿಗ್‍ಟೌನ್ ನ ಸ್ಟಾರ್ ನಟರುಗಳ ಚಿತ್ರಕ್ಕೆ ಸಾಹಸ ಸಂಯೋಜಿಸಿದ್ದಾರೆ.

ಲಾಲ್‍ಬಾದ್‍ಷಾ, ಇಷ್ಕ್, ಮಹಾಂತ, ಇತಿಹಾಸ್, ಸನಂ, ಪ್ರೇಮ್‍ಗ್ರಂಥ್, ಜಾನ್, ಹಕೀಕತ್, ಪ್ರೇಮ್ ದೀವಾಲೆ, ದಿವ್ಯ ಶಕ್ತಿ, ಅಲಗ್ ಅಲಗ್, ಮಾರ್ ಮಿಟೇಂಗೆ, ರಾಮ್ ತೇರಿ ಗಂಗಾ ಮೈಲಿ, ಸೀತಾಮಗರ್, ವಖ್ತ್ ಕಿ ಅವಾಜ್, ಅಜ್ ಕಾ ಅರ್ಜುನ್, ಹಿಂದೂ ಸ್ಥಾನ್ ಕಿ ಕಸಮ್ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಸ ಸಂಯೋಜಿಸಿದ್ದಾರೆ.

ವಖ್ತ್ ಕಿ ಕಸಮ್ ಚಿತ್ರವನ್ನು ನಿರ್ದೇಶಿಸಿದ್ದ ವೀರೂ ದೇವಗನ್‍ರ ಅಂತಿಮ ಸಂಸ್ಕಾರವು ಇಂದು ಸಂಜೆ ದೆಹಲಿಯಲ್ಲಿ ನಡೆಯಲಿದ್ದು ಬಿಗ್‍ಟೌನ್ ಸ್ಟಾರ್ ನಟರು, ನಿರ್ದೇಶಕರು, ನಿರ್ಮಾಪಕರು ಸಂತಾಪ ಸೂಚಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin