10 ವಿಕೆಟ್‍ ಪಡೆದು ದಾಖಲೆ ಬರೆದ ಅಜಾಜ್ ಪಟೇಲ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಡಿ.4- ನ್ಯೂಜಿಲೆಂಡ್‍ನ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೆ ಎಲ್ಲ ಹತ್ತು ವಿಕೆಟ್‍ಗಳನ್ನು ಪಡೆದ ಮೂರನೇ ಬೌಲರ್ ಎಂಬ ದಾಖಲೆ ಬರೆದರು. ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಣ 2ನೇ ಕ್ರಿಕೆಟ್ ಟೆಸ್ಟ್ ಪಂದ್ಯದ 3ನೇ ದಿನವಾದ ಇಂದು ದಿನದಾಟದ 2ನೇ ಅವಯಲ್ಲಿ ಭಾರತ 325 ರನ್‍ಗಳಿಗೆ ಆಲೌಟ್ ಆಗಲು ಕಾರಣರಾದ ಪಟೇಲ್ 119 ರನ್‍ಗಳನ್ನು ನೀಡಿ ಹತ್ತು ವಿಕೆಟ್‍ಗಳನ್ನು ಗಳಿಸಿ ಇಂಗ್ಲೆಂಡ್‍ನ ಜಿಮ್‍ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದರು.

ಕನ್ನಡಿಗ ಅನಿಲ್ ಕುಂಬ್ಳೆ ಅವರು ಪಾಕಿಸ್ತಾನದ ವಿರುದ್ಧ ಈ ಸಾಧನೆ ಮಾಡಿದ್ದರು. 4 ವಿಕೆಟ್‍ಗೆ 221 ರನ್‍ಗಳಿಂದ ದಿನದಾಟವನ್ನು ಪ್ರಾರಂಭಿಸಿದ ಭಾರತದ ಮೊದಲ ಅವಯಲ್ಲಿ ಎರಡು ವಿಕೆಟ್‍ಗಳನ್ನು ಕಳೆದುಕೊಂಡು 64 ರನ್‍ಗಳನ್ನು ಗಳಿಸಿತು. ಭೋಜನ ವಿರಾಮದ ಬಳಿಕ 4 ವಿಕೆಟ್ ಕಳೆದುಕೊಂಡು ಈ ಮೊತ್ತಕ್ಕೆ 40 ರನ್ ಸೇರಿಸಿದ ಭಾರತ 325 ರನ್‍ಗಳಿಗೆ ಸರ್ವಪತನ ಕಂಡಿತು.

ದಿನದಾಟದ ಆರಂಭದಲ್ಲಿ ಪಟೇಲ್ ಸತತ ಎರಡು ಎಸೆತಗಳಲ್ಲಿ ವೃದ್ದಿಮಾನ್ ಸಾಹ(27) ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ಪೆವಿಲಿಯನ್‍ಗೆ ಕಳುಹಿಸಿದರು. ಆನಂತರ ಮಯಾಂಕ್ ಅಗರ್‍ವಾಲ್(150) ಮತ್ತು ಅಕ್ಷರ್ ಪಟೇಲ್(52) ತಂಡದ ಸ್ಕೋರ್‍ನ್ನು 300 ಗಟಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್ – 109.5 ಓವರ್‍ಗಳಲ್ಲಿ 325ಕ್ಕೆ ಆಲೌಟ್( ಮಯಾಂಕ್ ಅಗರ್‍ವಾಲ್ 150, ಅಕ್ಷರ್ ಪಟೇಲ್ 52, ಶುಭಮಾನ್ ಗಿಲ್ 44, ಅಜಾಜ್ ಪಟೇಲ್ 119ಕ್ಕೆ 10).

Facebook Comments