ಸತತ ಬ್ಯಾಟಿಂಗ್ ವೈಫಲ್ಯ, ರಹಾನೆ ಮೇಲೆ ತೂಗುಗತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಕಾನ್ಪುರ,ನ. 28 – ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾದ ನಾಯಕ ಅಜೆಂಕಾ ರಹಾನೆ ಮೇಲೆ ತೂಗುಗತ್ತಿ ಆಡುತ್ತಿದ್ದಾರೆ.ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ 35 ಹಾಗೂ 4 ರನ್ ಗಳಿಸಿದ ಅಜೆಂಕ ರಹಾನೆ ಉತ್ತಮ ಫಾರ್ಮ್ಗೆ ಬರಲು ಇನ್ನೆಷ್ಟು ಪಂದ್ಯಗಳು ಬೇಕು ಎಂದು ಕ್ರಿಕೆಟ್ ಪ್ರೇಮಿಗಳು ಪ್ರಶ್ನಿಸುತ್ತಿದ್ದರೆ, ನಾಯಕತ್ವದಲ್ಲಿರುವಾಗಲೇ ರಹಾನೆ ಅವರ ಕ್ರಿಕೆಟ್ ಭವಿಷ್ಯ ಅಂತ್ಯಗೊಳ್ಳಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

ಈ ಹಿಂದೆ ಟ್ವೆಂಟಿ-20 ನಾಯಕ ವಿರಾಟ್ ಕೊಹ್ಲಿ ಕೂಡ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದಲೇ ಅವರ ನಾಯಕತ್ವವನ್ನು ಬದಲಾಯಿಸಬೇಕೆಂಬ ಕೂಗು ಎದ್ದಿತ್ತು, ಕೊನೆಗೂ ವಿರಾಟ್ ಕೊಹ್ಲಿ ಚುಟುಕು ಮಾದರಿಯ ಕ್ರಿಕೆಟ್ನ ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದು ಈಗ ಅದೇ ಹಾದಿಯನ್ನು ರಹಾನೆ ಕೂಡ ಹಿಡಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

2021ರಲ್ಲಿ ರಹಾನೆ 21 ಇನ್ನಿಂಗ್ಸ್ನಲ್ಲಿ ಕೇವಲ 2 ಅರ್ಧಶತಕ ಗಳಿಸಿರುವ ಬೆನ್ನಲ್ಲೇ ಯುವ ಆಟಗಾರರಾದ ಶಾರ್ದೂಲ್ ಠಾಕೂರ್, ಶ್ರೇಯಾಸ್ ಅಯ್ಯರ್ ಉತ್ತಮ ಪ್ರದರ್ಶನ ತೋರುತ್ತಿರುವ ಅವರ ಕ್ರಿಕೆಟ್ ಜೀವನ ಅಂತ್ಯಗೊಳ್ಳಲಿದೆ ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ.

Facebook Comments

Sri Raghav

Admin