3 ವರ್ಷದ ಬಳಿಕ ಆಕರ್ಷಕ ಶತಕ ಸಿಡಿಸಿದ ರಹಾನೆ..!

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಅ.20- ಇಲ್ಲಿ ನಡೆಯುತ್ತಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಶತಕ ಸಿಡಿಸಿದ್ದಾರೆ.
ಆಕರ್ಷಕ ಹೊಡೆತಗಳ ಸರದಾರನೆಂದೇ ಬಿಂಬಿತವಾಗಿರುವ ರಹಾನೆ ಈ ಶತಕಕ್ಕಾಗಿ ಮೂರು ವರ್ಷ ಕಾಯಬೇಕಾಗಿತ್ತು.

ಮೊದಲನೆ ದಿನದಾಟದಲ್ಲಿ ರೋಹಿತ್‍ಶರ್ಮ ಜತೆಗೂಡಿ ತಾಳ್ಮೆಯಿಂದಲೇ ಬ್ಯಾಟ್ ಬೀಸಿ ತಂಡಕ್ಕೆ ಆಸರೆಯಾಗಿದ್ದ ರಹಾನೆ ಇಂದು ಭೋಜನ ವಿರಾಮಕ್ಕೂ ಮುನ್ನವೇ ಶತಕ ಸಿಡಿಸಿ ಭಾರತದ ಪಾಳಯದಲ್ಲಿ ಸಂತಸ ಮೂಡಿಸಿದ್ದಾರೆ.

ಇದರಿಂದಾಗಿ ಭಾರತ ದೊಡ್ಡ ಮೊತ್ತ ದಾಖಲಿಸುವ ಸಾಧ್ಯತೆಯಿದ್ದು, ಮತ್ತೊಮ್ಮೆ ರೋಹಿತ್ ಶರ್ಮ ದ್ವಿಶತಕದ ಅಂಚಿಗೆ ತಲುಪಿದ್ದು, ಹೊಸ ದಾಖಲೆ ನಿರ್ಮಿಸುವತ್ತ ದಾಪುಗಾಲಿಟ್ಟಿದ್ದಾರೆ. ರಹಾನೆ 169 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 17 ಬೌಂಡರಿಗಳ ಮೂಲಕ ಶತಕ ಸಿಡಿಸಿದ್ದಾರೆ.

ಈ ಟೆಸ್ಟ್ ಪಂದ್ಯವನ್ನು ಕೂಡ ಜಯಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು ವೈಟ್‍ವಾಷ್ ಮಾಡಲು ಕೊಹ್ಲಿ ಪಡೆ ಸರಿಯಾದ ಹಾದಿಯಲ್ಲೇ ಸಾಗಿದೆ.

Facebook Comments