ರಾಯಲ್ಸ್ ತೊರೆದ ರಹಾನೆ

ಈ ಸುದ್ದಿಯನ್ನು ಶೇರ್ ಮಾಡಿ

ಜೈಪುರ, ನ. 14- ಭಾರತ ಟೆಸ್ ತಂಡದ ಉಪನಾಯಕ ಅಜೆಂಕ್ಯಾ ರಹಾನೆಯನ್ನು ಜೈಪುರ ಫ್ರಾಂಚೈಸಿಗಳು ಹೊರ ಬಿಟ್ಟಿರುವುದರಿಂದ ಮುಂದಿನ ಆವೃತ್ತಿಯ ಐಪಿಎಲ್‍ನಲ್ಲಿ ದೆಹಲಿ ಕ್ಯಾಪಿಟಲ್ಸ್ ಪರವಾಗಿ ಮೈದಾನಕ್ಕಿಳಿಯಲಿದ್ದಾರೆ. ಆಟಗಾರರನ್ನು ತಂಡದಿಂದ ಕೈಬಿಡಲು ನಾಳೆ ಕೊನೆಯ ದಿನವಾಗಿದ್ದು ರಾಯಲ್ಸ್ ತಂಡವು ರಹಾನೆಯನ್ನು ಹೊರಗಿಟ್ಟಿದ್ದಾರೆ.

ಕಳೆದ 2011ರಿಂದಲೂ ರಾಜಸ್ಥಾನ್ ರಾಯಲ್ಸ್ ತಂಡದ ಖಾಯಂ ಆಟಗಾರನಾಗಿ ಗುರುತಿಸಿಕೊಂಡಿದ್ದ ರಹಾನೆ ಕಳೆದ ಋತುವಿನಲ್ಲಿ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದರು.

ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ಅವರು ದೆಹಲಿ ತಂಡದ ಸಲಹೆಗಾರನಾಗಿಯೂ ಕಾರ್ಯನಿರ್ವಹಿಸುತ್ತಿದ್ದು ರಹಾನೆ ಕ್ರಿಕೆಟ್‍ನ ಎಲ್ಲಾ ಮಾದರಿಯ ಆಟಕ್ಕೂ ಸೂಕ್ತವಾಗು ವಂತಹ ಆಟಗಾರ, ಅವರ ಸೇರ್ಪಡೆಯಿಂದ ತಂಡದ ಬ್ಯಾಟಿಂಗ್ ಬಲ ಹೆಚ್ಚಿದೆ ಎಂದು ಹೇಳಿದರು.

ಡೆಲ್ಲಿ ಕ್ಯಾಪಿಟಲ್ಸ್‍ನಲ್ಲಿ ಈಗಾಗಲೇ ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಾಸ್ ಐಯ್ಯರ್, ರಿಷಭ್‍ಪಂತ್, ಹನುಮವಿಹಾರಿ ಅಂತಹ ಬ್ಯಾಟಿಂಗ್ ದಿಗ್ಗಜರಿದ್ದು ಈಗ ರಹಾನೆ ಕೂಡ ಆ ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಲಿದ್ದಾರೆ. ಐಪಿಎಲ್‍ನಲ್ಲಿ ಪರಿಣಾಮಕಾರಿ ಆಟಗಾರನಾಗಿರುವ ರಹಾನೆ ಇದುವರೆಗೂ 3820 ರನ್‍ಗಳನ್ನು ಗಳಿಸಿದ್ದಾರೆ.

ಮುಂಬೈ ಪಾಲಾದ ಧವಳ್ ಕುಲಕರ್ಣಿ: ಭಾರತ ತಂಡದ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದ ಧವಳ್‍ಕುಲಕರ್ಣಿಯು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಂಡಿದ್ದರೆ, ಆ ತಂಡದಲ್ಲಿದ್ದ ಸ್ಟಾರ್ ಆಟಗಾರ ಎವಿನ್ ಲೆವಿಸ್‍ರನ್ನು ಕೈ ಬಿಟ್ಟಿದ್ದಾರೆ.

ರಾಜಸ್ಥಾನ್ ಪಾಲಾದ ಅಂಕಿತ್: 2018 ಹಾಗೂ 2019ರ ಐಪಿಎಲ್‍ನಲ್ಲಿ ಕಿಂಗ್ ಇಲೆವೆನ್ ತಂಡದ ಬೌಲಿಂಗ್ ಬಲವನ್ನು ಹೆಚ್ಚಿಸಿದ್ದ ಅಂಕಿತ್ ರಜಪೂತ್ ಬರುವ ಆವೃತ್ತಿಯಿಂದ ರಾಜಸ್ಥಾನ್ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಅಂಕಿತ್ 2018ರ ಐಪಿಎಲ್‍ನಲ್ಲಿ ಒಟ್ಟು 22 ವಿಕೆಟ್‍ಗಳನ್ನು ಕಬಳಸಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‍ನಿಂದ ಬೋಲ್ಟ್ ಔಟ್: ಏಕದಿನ ಕ್ರಿಕೆಟ್‍ನ ನಂಬರ್ ಒನ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ನ್ಯೂಜಿಲೆಂಡ್‍ನ ಟ್ರೆಂಡ್ ಬೌಲ್ಟ್ ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಬಲವನ್ನು ಹೆಚ್ಚಿಸಿದ್ದರೂ ಕೂಡ ಆ ತಂಡವು ಅವರನ್ನು ಅವರು ಕೈ ಬಿಟ್ಟಿದ್ದರಿಂದ ಮುಂದಿನ ಐಪಿಎಲ್ ಆವೃತ್ತಿಯಿಂದ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡವನ್ನು ಬೌಲಿಂಗ್ ಬಲವನ್ನು ಹೆಚ್ಚಿಸಲಿದ್ದಾರೆ. ಬೌಲ್ಟ್ 33 ಐಪಿಎಲ್ ಪಂದ್ಯಗಳಿಂದ 38 ವಿಕೆಟ್‍ಗಳನ್ನು ಕಬಳಸಿದ್ದಾರೆ.

ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದವು ನಾಳೆ ತಮ್ಮ ತಂಡದಿಂದ ಹೊರಹಾಕುವ ಆಟಗಾರರ ಹೆಸರುಗಳನ್ನು ಬಹಿರಂಗಗೊಳಿಸಲಿದ್ದಾರೆ.

Facebook Comments